ಹತೋಟಿಗೆ ಬಾರದ ಹವಾಯಿ ಕಾಡ್ಗಿಚ್ಚು
- vishwa patha
- Aug 12, 2023
- 1 min read
ಹವಾಯಿ: ವಿಶ್ವ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ನ ಐತಿಹಾಸಿಕ ದ್ವೀಪ ರಾಜ್ಯವಾದ ಹವಾಯಿಯಲ್ಲಿ ಕಾಳ್ಗಿಚ್ಚು ಮುಂದುವರೆದಿದ್ದು ಮೃತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಇನ್ನೂ ಪತ್ತೆಯಾಗದ ಸುಮಾರು 1,000 ಜನರಿಗಾಗಿ ಹುಡುಕಾಟಗಳು ನಡೆಯುತ್ತಿವೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲ ದಿನಗಳಿಂದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದರೂ ಸಹ ಬೆಂಕಿ ಹತೋಟಿಗೆ ಬಂದಿಲ್ಲ. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಿವೆ ಎನ್ನಲಾಗಿದೆ.
ಎತ್ತ ನೋಡಿದರೂ ಸುಟ್ಟು ಕರಕಲಾಗಿರುವ ಕಟ್ಟಡ, ಮರಗಳು, ಪ್ರಾಣಿಗಳು ಸೇರಿದಂತೆ ಎಲ್ಲವೂ ಅಗ್ನಿಗೆ ಆಹುತಿಯಾಗಿದ್ದು ಪ್ರದೇಶ ತುಂಬಾ ಬೂದಿ ಆವರಿಸಿಕೊಂಡಿದೆ. ಕಾಳ್ಗಿಚ್ಚಿಗೆ ಸುಮಾರು 1,700 ಕ್ಕೂ ಹೆಚ್ಚು ಕಟ್ಟಡಗಳು ಸುಟ್ಟು ಬೂದಿಯಾಗಿವೆ. ಇದು ಹವಾಯಿ ದ್ವೀಪ ಪ್ರದೇಶದಲ್ಲಿ ನಡೆದ ದೊಡ್ಡ ಘಟನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಗ್ನಿ ಅವಘಡದಿಂದ ನಗರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು ಜೊತೆಗೆ ನೆಟ್ ವರ್ಕ್ ಕಡಿತಗೊಂಡಿದೆ.
Comments