ಬೆಂಗಳೂರು: ಹೆಚ್ಎಎಲ್ ಏರ್ಪೋರ್ಟ್ನಲ್ಲಿ ಮಂಗಳವಾರ ವಿಮಾನ ತುರ್ತು ಭೂಸ್ಪರ್ಶವಾಗಿದೆ ಎಂದು ವರದಿಯಾಗಿದೆ. ಆಪರೇಟಿಂಗ್ ವಿಮಾನ ಟೇಕ್ ಆಫ್ ಆದ ನಂತರ ತಾಂತ್ರಿಕ ದೋಷ ಕಂಡ ಹಿನ್ನೆಲೆ ಮತ್ತೆ ಹೆಚ್ಎಎಲ್ನಲ್ಲೇ ವಿಮಾನ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಸುರಕ್ಷಿತವಾಗಿದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ವಿಮಾನವು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು ಎಂದು ಹೇಳಲಾಗಿದೆ.
top of page
bottom of page
Comments