ಚನ್ನಗಿರಿ: ಸೂಳೆಕೆರೆಯಿಂದ ಪಟ್ಟಣಕ್ಕೆ ಪೂರೈಸುತ್ತಿರುವ ಕುಡಿಯುವ ನೀರು, ಬಳಕೆಗೆ ಯೋಗ್ಯವಿಲ್ಲವೆಂದು ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷಾ ತಂಡ ಭೇಟಿ ನೀಡಿ ವರದಿ ಸಲ್ಲಿಸಿದ್ದು, ಕೆರೆ ಸ್ವಚ್ಛಗೊಳಿಸುವ ಕಾರಣ ಪಟ್ಟಣಕ್ಕೆ 3 ತಿಂಗಳವರೆಗೆ ಸೂಳೆಕೆರೆ ನೀರು ಪೂರೈಕೆ ಆಗುವುದಿಲ್ಲ, ನಾಗರಿಕರು ಸಹಕರಿಸಬೇಕು ಎಂದು ಪುರಸಭೆ ಅಧ್ಯಕ್ಷೆ ಲಕ್ಷಿತ್ರ್ಮದೇವಿ ಹೇಳಿದ್ದಾರೆ.
ಚನ್ನಗಿರಿಗೆ ವಾರಕೊಮ್ಮೆ ನೀರು
ಹಿರೇಮಳಲಿಯಿಂದ ಬರುವಂತಹ ನೀರು ಪಟ್ಟಣದ ಮೂರು ಟ್ಯಾಂಕ್‌ಗಳಿಗೆ ಮಾತ್ರವೇ ಕನೆಕ್ಷನ್ ಇದ್ದು ಇದರಿಂದ ಪಟ್ಟಣದ ಶೇ.50ರಷ್ಟು ಭಾಗ ನೀರನ್ನು ನೀಡಬಹುದಾಗಿದೆ. ಅದರಲ್ಲಿಯೂ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಬಹುದಾಗಿದೆ. ಸೂಳೆಕೆರೆ ನೀರು ಪೂರೈಕೆ ಸಂಪರ್ಕ ಇರುವಂತಹ ವಾರ್ಡಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲಾಗುವುದು. ಪ್ರತಿ ಮನೆಗೆ ತಲಾ 5 ಬಿಂದಿಗೆ ಪೂರೈಕೆ ಮಾಡಲಾಗುವುದು. ಪಟ್ಟಣದ ನಾಗರಿಕರು ಪುರಸಭೆಯೊಂದಿಗೆ ಸಹಕಾರ ನೀಡಬೇಕು. ಎಂದು ಪುರಸಭೆಯ ಎಂಜಿನಿಯರ್ ಪ್ರಕಾಶ್ ಮನವಿ ಮಾಡಿದ್ಧಾರೆ.
ದಾವಣಗೆರೆಯ ಚನ್ನಗಿರಿ ನಗರಕ್ಕೆ ಶಾಂತಿಸಾಗರ ಕೆರೆಯಿಂದಲೇ ನೀರು ಸರಬರಾಜಾಗುತ್ತಿತ್ತು. ಆದರೆ, ಕಳೆದೊಂದು ವಾರದಿಂದ ಕರೆಯ ನೀರು ಕೆಂಪು ಮಿಶ್ರಿತ ನೀರಾಗಿ ಪರಿವರ್ತನೆಯಾಗಿತ್ತು. ಆ ನೀರನ್ನು ಪರೀಕ್ಷಿಸಲಾಗಿ, ಅದು ಕುಡಿಯಲು ಯೋಗ್ಯವಲ್ಲ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಗಿರಿ ಪಟ್ಟಣಕ್ಕೆ ತಾತ್ಕಾಲಿಕವಾಗಿ, ಅಂದರೆ ಸುಮಾರು ಮೂರು ತಿಂಗಳವರೆಗೆ ಕುಡಿಯುವ ನೀರಿನ ಸರಬರಾಜು ನಿಲ್ಲಿಸುವಂತೆ ಪುರಸಭೆಯ ಸದಸ್ಯರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಚನ್ನಗಿರಿ ಪಟ್ಟಣಕ್ಕೆ ಈ ಹಿಂದೆ ನೀರು ಸರಬರಾಜು ಮಾಡಲಾಗುತ್ತಿದ್ದ ಹಿರೇಮಳಲಿ ನೀರು ಪೂರೈಕೆ ಕೇಂದ್ರದಿಂದ ನೀರು ಪೂರೈಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments