top of page
Writer's picturevishwa patha

ವಾಹನ ನಿಲುಗಡೆ ನಿರ್ಬಂಧಿಸಲು ಕಟ್ಟಡ ಮಾಲೀಕರಿಗೆ ಹಕ್ಕಿಲ್ಲ!

Updated: Aug 12, 2023

ಬೆಂಗಳೂರು: ವಾಹನ ಪಾರ್ಕಿಂಗ್‌ ದೊಡ್ಡ ಸವಾಲಿನ ಕೆಲಸ. ಈ ನಡುವೆ ಕಟ್ಟಡಗಳ ಮಾಲೀಕರು ನಮ್ಮ ಕಟ್ಟಡದ ಮುಂದೆ ವಾಹನ ನಿಲ್ಲಿಸಬೇಡಿ ಎಂಬ ಷರತ್ತು ಹಾಕುತ್ತಾರೆ. ಈ ಬಗ್ಗೆ ನಗರ ಪೊಲೀಸ್‌ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.


''ಕಟ್ಟಡದ ಎದುರು ಭಾಗ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿಯಾವುದೇ ವಾಣಿಜ್ಯ ಕಟ್ಟಡ ಮಾಲೀಕರು ತಮ್ಮ ಗ್ರಾಹಕರಿಗೆ ಮಾತ್ರ ಪಾರ್ಕಿಂಗ್‌ಗೆ ಅವಕಾಶ ಎಂದು ಬೋರ್ಡ್‌ ಅಳವಡಿಸುವಂತಿಲ್ಲ,'' ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಸ್ಪಷ್ಪಪಡಿಸಿದರು.






ಸಂಚಾರ ಪೊಲೀಸ್‌ ಇಲಾಖೆ ವತಿಯಿಂದ ಬೆಳ್ಳಂದೂರಿನಲ್ಲಿ ಒಆರ್‌ಆರ್‌ಸಿಎ (ಔಟರ್‌ರಿಂಗ್‌ ರೋಡ್‌ ಕಂಪನೀಸ್‌ ಅಸೋಸಿಯೇಶನ್‌) ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ 'ಸಂಪರ್ಕ ದಿವಸ' ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಐಟಿ, ಬಿಟಿ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.


ಐಟಿ ಕಾರಿಡಾರ್‌ ಪ್ರದೇಶವನ್ನು ಹೆಚ್ಚಾಗಿ ಕಾಡುತ್ತಿರುವ ಸಂಚಾರ ಸಮಸ್ಯೆ ಪರಿಹಾರೋಪಾಯಗಳ ಕುರಿತು ಸಂವಾದದಲ್ಲಿ ಚರ್ಚೆ ನಡೆಯಿತು. ಪಾರ್ಕಿಂಗ್‌ ವ್ಯವಸ್ಥೆ ಸುಧಾರಿಸಿದಲ್ಲಿ ಸಂಚಾರ ವ್ಯವಸ್ಥೆಯೂ ಹಳಿಗೆ ಬರಲಿದೆ ಎಂದು ಹಲವರು ಅಭಿಪ್ರಾಯಪಟ್ಟರು.


ಪಾದಚಾರಿ ಮಾರ್ಗಗಳಲ್ಲಿ ಅಂಗಡಿಗಳನ್ನು ನಿಷೇಧಿಸಿ

''ಐಟಿ, ಬಿಟಿ ಕಂಪನಿಗಳ ಪಾದಚಾರಿ ಮಾರ್ಗಗಳಲ್ಲಿ ಅಂಗಡಿಗಳನ್ನು ನಿಷೇಧಿಸಬೇಕು. ನೋ ಪಾರ್ಕಿಂಗ್‌ ಸ್ಥಳದಲ್ಲಿವಾಹನ ನಿಲುಗಡೆ ಮಾಡುವ ವಾಹನಗಳಿಗೆ ವ್ಹೀಲ್‌ ಕ್ಲ್ಯಾಂಪ್‌ ಹಾಕಬೇಕು. ಪೇ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು,'' ಎಂದು ಐಟಿ ಕಂಪನಿಯ ಪ್ರತಿನಿಧಿಯೊಬ್ಬರು ಸಲಹೆ ನೀಡಿದರು.


ಆಟೊ ರಿಕ್ಷಾದಿಂದ ಪಾರ್ಕಿಂಗ್ ಸಮಸ್ಯ

''ಕೆಲವೆಡೆ ಅನಧಿಕೃತವಾಗಿ ಆಟೊ ರಿಕ್ಷಾಗಳನ್ನು ಪಾರ್ಕಿಂಗ್‌ ಮಾಡಲಾಗುತ್ತಿದೆ. ನಿಲ್ದಾಣಗಳಲ್ಲಿನಿಗದಿಗಿಂತ ಹೆಚ್ಚು ಆಟೊ ನಿಲುಗಡೆ ಮಾಡುವುದರಿಂದ ಇತರ ವಾಹನಗಳ ಪಾರ್ಕಿಂಗ್‌ಗೆ ಸಮಸ್ಯೆಯಾಗಿದೆ,'' ಎಂದು ಅವರು ದೂರಿದರು.


''ನೋ ಪಾರ್ಕಿಂಗ್‌ ಪ್ರದೇಶದಲ್ಲಿಪಾರ್ಕಿಂಗ್‌ ಮಾಡುವ ವಾಹನಗಳಿಗೆ ವ್ಹೀಲ್‌ ಕ್ಲ್ಯಾಂಪ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಲು ಸೂಚಿಸಲಾಗುವುದು. ವಾಣಿಜ್ಯ ಕಟ್ಟಡ, ಶಾಲೆಗಳ ಬಳಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಅವಶ್ಯಕತೆ ಇದ್ದಲ್ಲಿಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು,'' ಎಂದು ಬಿ.ದಯಾನಂದ್‌ ಹೇಳಿದರು.


ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು

''ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ಕೆಳ ಅಂತಸ್ತುಗಳಲ್ಲಿ ವಾಣಿಜ್ಯ ಮಳಿಗೆಗಳು ಕಾರ್ಯಾಚರಿಸುತ್ತಿವೆ. ಕೆಲ ಪ್ರತಿಷ್ಠಿತ ಹೊಟೇಲ್‌ಗಳಲ್ಲೂ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಕೆಲ ಆಸ್ಪತ್ರೆಗಳಿಗೆ ಬರುವ ರೋಗಿಗಳ ವಾಹನಗಳನ್ನು ನಿಲ್ಲಿಸಲು ಕೂಡ ಜಾಗವಿಲ್ಲ. ಇದಲ್ಲದೆ ಕಟ್ಟಡ ಮಾಲೀಕರು ಕಟ್ಟಡದ ಎದುರಿನ ಜಾಗ ತಮ್ಮ ಗ್ರಾಹಕರಿಗೆ ಮಾತ್ರ ಸೀಮಿತ ಎಂಬ ಬೋರ್ಡ್‌ ಹಾಕುತ್ತಿದ್ದಾರೆ,'' ಎಂದು ಸಾರ್ವಜನಿಕರೊಬ್ಬರು ದೂರಿದರು.

Comments


bottom of page