ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ರವೀಂದ್ರನಾಥ ಠಾಗೋರ್ ಬರೆದ ನಮ್ಮ ದೇಶದ ಹೆಮ್ಮೆಯ ರಾಷ್ಟ್ರ ಗೀತೆಗೆ ಸ್ಪೆಷಲ್ ಟ್ಯೂನ್ ಕಂಪೋಸ್ ಮಾಡಿದ್ದಾರೆ. ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ನೀಡಿರುವ ರಿಕಿ ಅದನ್ನು ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ರಿಲೀಸ್ ಮಾಡಲಿದ್ದಾರೆ.
ಲಂಡನ್‌ನಲ್ಲಿ ರಿಲೀಸ್ ಮಾಡಲು ತಯಾರಿ
ಆಗಸ್ಟ್ 14ರಂದು ಸಂಜೆ 5 ಗಂಟೆ ರಿಕಿ ಕೇಜ್ ಸಾರಥ್ಯದಲ್ಲಿ ಈ ಹೊಸ ಟ್ಯೂನ್ ರಾಷ್ಟ್ರಗೀತೆ ಬಿಡುಗಡೆ ಆಗಲಿದೆ. ವಿಶೇಷವೆಂದರೆ, ಲಂಡನ್‌ನ ಅಬ್ಬೆ ರೋಡ್ ಸ್ಟುಡಿಯೋಸ್‌ನಲ್ಲಿ ಹೊಸ ಟ್ಯೂನ್ ಇರುವ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಕೇವಲ 3 ಗಂಟೆ ಅವಧಿಯಲ್ಲಿ, 100 ಮಂದಿ ಸಿಬೋನಿಕ್ ಸಂಗೀತಗಾರರ ಸಹಯೋಗದಲ್ಲಿ ಜನ ಗಣ ಮನ ಗೀತೆ ಸಿದ್ಧವಾಗಿದೆ.
ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಮೂರು ಬಾರಿ ಪಡೆದುಕೊಂಡಿರುವ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಜನಗಣಮನ ಗೀತೆಗೆ ಸ್ಪೆಷಲ್ ಟ್ಯೂನ್ ಕಂಪೋಸ್ ಮಾಡಿದ್ದಾರೆ.
ರಾಷ್ಟ್ರ ಗೀತೆಗೆ ಹೊಸ ಟಚ್ ನೀಡಿರುವ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ಹಂಚಿಕೊಂಡ ರಿಕಿ ಕೇಜ್, ನಮ್ಮ ರಾಷ್ಟ್ರಗೀತೆಯಾದ ಜನ ಗಣ ಮನಕ್ಕೆ ಹೊಸ ಬಗೆಯ ಟ್ಯೂನ್ ಮೂಲಕ ಹೊಸ ಟಚ್ ನೀಡಲಾಗಿದೆ. ಈ ರಾಷ್ಟ್ರಗೀತೆ ರಿಲೀಸ್ ಮಾಡಲು ನಾನು ಕಾತುರನಾಗಿದ್ದೇನೆ. ಲಂಡನ್ ಮೂಲದ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದ ಸಹಯೋಗದಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿದರು.
Comments