top of page
Writer's picturevishwa patha

ಬೆಂಗಳೂರಿಗೆ ಅಪ್ಪಳಿಸಲಿದೆ ಸೈಕ್ಲೋನ್‌! 3 ದಿನ ಮಳೆ ಎಚ್ಚರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ಗರಿಷ್ಠಮಟ್ಟದಿಂದ 5 ರಿಂದ 6 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿದಿದೆ. ಜತೆಗೆ ಸೈಕ್ಲೋನ್‌ ಕೂಡ ಅಪ್ಪಿಸುತ್ತಿದ್ದು, ಇನ್ನೂ 2 - 3 ದಿನ ನಗರದಲ್ಲಿ ಚಳಿ ಜತೆಗೆ ಮಳೆ ಸುರಿಯಲಿದೆ.



ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕುಸಿದಿತ್ತು. 27 ಅಥವಾ 28 ಡಿಗ್ರಿ ಸೆಲ್ಸಿಯಸ್‌ ಇರುತ್ತಿದ್ದ ಗರಿಷ್ಠ ಉಷ್ಣಾಂಶವು ಶನಿವಾರ, ಭಾನುವಾರಕ್ಕೆ 23 ರಿಂದ 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಇನ್ನು ಕನಿಷ್ಠ ಉಷ್ಣಾಂಶವು 18- 19 ಡಿಗ್ರಿ ಸೆಲ್ಸಿಯಸ್‌ ಇದೆ. ಈ ಹಿನ್ನೆಲೆ ನಗರದಲ್ಲಿ ದಿನವಿಡೀ ಜೋರು ಚಳಿ ವಾತಾವರಣ ಇತ್ತು. ಇನ್ನು ಈ ಚಳಿ ವಾತಾವರಣದಿಂದ ನಡಗುತ್ತಿರುವ ಬೆಂಗಳೂರಿನ ಜನರಿಗೆ ಡಿಸೆಂಬರ್‌ 1 ರಿಂದ 4 ವರೆಗೂ ಮಳೆಯೂ ಕಾಡಲಿದೆ.


ಶ್ರೀಲಂಕಾದಲ್ಲಿ ಹುಟ್ಟಿರುವ ಫೆಂಗಲ್‌ ಚಂಡಮಾರುತ ಭಾರತಕ್ಕೆ ಆಗಮಿಸಲಿದೆ. ಮುಂದಿನ ವಾರದ ಮೊದಲ ಮೂರು ದಿನ ತಮಿಳುನಾಡು, ಕರ್ನಾಟಕದ ಹಲವು ಪ್ರದೇಶದ ಮೂಲಕ ಹಾದುಹೋಗಿ ಅರಬ್ಬಿ ಸಮುದ್ರ ತಲುಪಲಿದೆ. ಇನ್ನು ಈ ಮಾರುತದ ಪರಿಣಾಮ ಈಗಾಗಲೇ ತಮಿಳುನಾಡಿ ಮೇಲೆ ಪರಿಣಾಮ ಬೀರಿದ್ದು, ಚೆನ್ನೈ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅಪಾರ ಮಳೆಯಾಗುತ್ತಿದೆ. ಬೆಂಗಳೂರಿಗೆ ಸೈಕ್ಲೋನ್‌ ಅಪ್ಪಳಿಸಲಿದ್ದು, ಈಗಾಗಲೇ ಹವಾಮಾನ ಬದಲಾವಣೆಯಾಗಿದೆ.


ಚಳಿ ಜತೆಗೆ ಸೈಕ್ಲೋನ್‌ ಹಿನ್ನೆಲೆ ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್‌ 2 ಮತ್ತು 4 ರಂದು ಯೆಲ್ಲೋ ಅಲರ್ಟ್‌ ನೀಡಿದೆ. ಡಿಸೆಂಬರ್‌ 3 ರಂದು ಸೈಕ್ಲೋನ್‌ ಅಪ್ಪಳಿಸುವ ಹಿನ್ನೆಲೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಭಾನುವಾರದಿಂದ ಬುಧವಾರದವರೆಗೂ 4 ದಿನ ಸಾಧಾರಣ ಹಾಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.

Commentaires


bottom of page