ಬೆಂಗಳೂರು: ನಾಳೆಯಿಂದ ಹಾಲಿನ ದರ ಏರಿಕೆಯಾಗಲಿದೆ. ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ 3 ರೂಪಾಯಿ ಏರಿಸಿತ್ತು. ಹೊಸ ದರಗಳು ನಾಳೆಯಿಂದ ಅನ್ವಯವಾಗಲಿವೆ. ಕೆಎಂಎಫ್ ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ 3 ರೂಪಾಯಿ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಹೆಚ್ಚಳವಾದ 3 ರೂಪಾಯಿ ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ಸಿಎಂ ಸೂಚಿಸಿದ್ದಾರೆ. ಬೆಲೆ ಏರಿಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂದಿನಿ ದರ ಎಷ್ಟಿದೆ? ಲೀಟರ್ ಲೆಕ್ಕ | ಈಗ | ಆ.1ರಿಂದ |
ಟೋನ್ಡ್ ಹಾಲು | ₹39 | ₹42 |
ಹೋಮೋಜಿನೈಸ್ಡ್ | ₹40 | ₹43 |
ಸ್ಪೆಷಲ್ ಹಾಲು | ₹45 | ₹48 |
ಶುಭಂ ಹಾಲು | ₹45 | ₹48 |
ಸಮೃದ್ಧಿ ಹಾಲು | ₹50 | ₹53 |
ಸಂತೃಪ್ತಿ ಹಾಲು | ₹52 | ₹55 |
ಡಬ್ಬಲ್ ಟೋನ್ಡ್ ಹಾಲು | ₹38 | ₹41 |
ಮೊಸರು ಪ್ರತಿ ಲೀ.ಗೆ | ₹47 | ₹50 |
Comments