top of page

ಕೆಂಪು ರಂಗೀಲಾ!

  • Writer: vishwa patha
    vishwa patha
  • Jan 31, 2024
  • 1 min read


ಕೆಂಪು ರಂಗೀಲಾ!

ಬಿಳಿಯಾಗುವುದೆಂದ?

ಗನ್ನ ತೊರೆದು

ಪೆನ್ನ ತಡುಕುವುದೆಂದ?


ಕ್ರಾಂತಿಯಾಗ ಬೇಕೆಂದರ

ಬಿಳಿಯದೆ ಆಗಲಿ

ಕೆಂಪಿನದು ಬೇಡೆನ್ನುವ

ಸಂಪಿರದ ಪೀಳಿಗೆಯ ನೋಡ.!


ಬಂದೂಕ ನಳಿಕೆಯೊಳಗಿನ

ಗುಂಡ ಬದಲಿ

ಗುಂಡಿಗಿಯೊಳಗನ ಕಪೋತ

ಹಾರಿಸಿ, ಚೆಂದ ಕಾಣ!


ನೆತ್ತರದೊಳಗಿನ

ಬಿಳಿ ಕಣದ ಮೌಲ್ಯ ಗಾನ

ಜಾಜಿ ಕಂಪಿನ ಪಾನ ಮಾಡ!

ಕೆಂಪಿನೊಳಗ ಬಿಳಿಯ ತೂರ!

ಶಾಂತಿ ಸಾರ, ನೀ ಶಾಂತಿ ಸಾರ

ನಿನ್ನೊಳಗ ನೀ ಶಾಂತಿ ಸಾರ.!

Comentários


bottom of page