ಡಿಸೆಂಬರ್ 1 ಅಂದರೆ ಇಂದು ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದ್ದು, ತೈಲ ಕಂಪನಿಗಳು ಸಿಲಿಂಡರ್ ದರವನ್ನು 16.5 ರೂಪಾಯಿ ಹೆಚ್ಚಳ ಮಾಡಿರುವುದಾಗಿ ವರದಿಯಾಗಿದೆ.
ಆದರೆ, ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಎಂದಿನಂತೆಯೇ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಈಗ ಹೊಸ ದರ ಪರಿಷ್ಕರಣೆಯಾಗಿದ್ದು 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಂದಿನಿಂದ 1,818.50 ರೂಪಾಯಿ ಆಗಿರಲಿದೆ.
ವಾಣಿಜ್ಯ ಬಳಕೆಯ 5 ಕೆ.ಜಿ ತೂಕದ ಸಿಲಿಂಡರ್ ದರದಲ್ಲೂ 4 ರೂಪಾಯಿ ಹೆಚ್ಚಾಗಿದ್ದು, 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ಕಳೆದ ತಿಂಗಳು ಸಹ 19 ಕೆ.ಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬರೋಬ್ಬರಿ 62 ರೂಪಾಯಿ ಏರಿಕೆ ಕಂಡಿತ್ತು. ಇದೀಗ ಡಿಸೆಂಬರ್ ತಿಂಗಳಲ್ಲೂ ಬೆಲೆ ಏರಿಕೆ ಮುಂದುವರಿದಿದೆ.
ಪ್ರತಿ ತಿಂಗಳ ಮೊದಲ ದಿನವೇ ವಾಣಿಜ್ಯ ಉದ್ದೇಶಕ್ಕೆ ಬಳಸುವ ಎಲ್‌ಪಿಜಿ ಸಿಲಿಂಡರ್‌ಗಳ ದರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಇದರಿಂದ ವಾಣಿಜ್ಯ ಸಂಸ್ಥೆಗಳು, ವ್ಯಾಪಾರಿಗಳ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಅಲ್ಲದೆ ಬಹುತೇಕ ಹೋಟೆಲ್‌ಗಳಲ್ಲೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನೇ ಹೆಚ್ಚಾಗಿ ಬಳಕೆ ಮಾಡುವುದರಿಂದಾಗಿ ಅವರಿಗೂ ಇದರ ಬಿಸಿ ತಟ್ಟಿದೆ ಎಂದು ಹೇಳಲಾಗುತ್ತಿದೆ. ಇದು ಕ್ರಮೇಣ ಹೋಟೆಲ್‌ಗಳಲ್ಲೂ ಆಹಾರದ ದರ ಕೂಡ ಏರಿಸುವ ಸಾಧ್ಯತೆಯೂ ಇದೆ.
Commentaires