ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿ ಚಾಲ್ತಿಯಲ್ಲಿರುವಾಗಲೇ ಈ ಪಂದ್ಯ ಮುಗಿಯುತ್ತಿದ್ದಂತೆ ಕ್ರಿಕೆಟ್ಗೆ ವಿದಾಯ ಹೇಳಲಿದ್ದೇನೆ ಎಂದು ಇಂಗ್ಲೆಂಡ್ ವೇಗಿ ಬ್ರಾಡ್ ಘೋಷಿಸಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿ ಚಾಲ್ತಿಯಲ್ಲಿರುವಾಗಲೇ ಈ ಪಂದ್ಯ ಮುಗಿಯುತ್ತಿದ್ದಂತೆ ಕ್ರಿಕೆಟ್ಗೆ ವಿದಾಯ ಹೇಳಲಿದ್ದೇನೆ ಎಂದು ಇಂಗ್ಲೆಂಡ್ ವೇಗಿ ಬ್ರಾಡ್ ಘೋಷಿಸಿದ್ದಾರೆ.
ಸ್ಟುವರ್ಟ್ ಬ್ರಾಡ್‌ಗೆ ಪ್ರಸ್ತುತ 37 ವರ್ಷ. ಕ್ರಿಕೆಟ್ ಆಡುವುದಕ್ಕೆ ಈಗಲೂ ಫಿಟ್ ಆಗಿದ್ದಾರೆ. ಆದಾಗ್ಯೂ, ಅವರು ದಿಢೀರ್ ನಿವೃತ್ತಿಯ ಘೋಷಿಸುವ ಮೂಲಕ ಕೆಲವು ಇಂಗ್ಲೆಂಡ್ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದ್ದಾರೆ. ಪ್ರಸ್ತುತ ಓವಲ್‌ನಲ್ಲಿ ನಡೆಯುತ್ತಿರುವ ಕೊನೆಯ ಆಶಸ್ ಟೆಸ್ಟ್ ಪಂದ್ಯಕ್ಕೂ ಮುನ್ನ, ಬ್ರಾಡ್ 166 ಟೆಸ್ಟ್‌ಗಳಲ್ಲಿ 600 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 121 ಏಕದಿನ ಪಂದ್ಯಗಳಲ್ಲಿ 178 ವಿಕೆಟ್ ಪಡೆದಿದ್ದಾರೆ. 56 ಟಿ20 ಪಂದ್ಯಗಳಿಂದ 65 ವಿಕೆಟ್‌ಗಳನ್ನು ಪಡೆದಿದ್ದಾರೆ.
ಬ್ರಾಡ್ ODI ಮತ್ತು T20I ಗಳಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಅವರು ಟೆಸ್ಟ್ನಲ್ಲಿ ಉತ್ತಮ ಬೌಲರ್ ಎಂದು ಖ್ಯಾತಿ ಗಳಿಸಿದರು. ಮತ್ತೊಬ್ಬ ವೇಗಿ ಜೇಮ್ಸ್ ಆಂಡರ್ಸನ್ ಜೊತೆಗೂಡಿ ಇಂಗ್ಲೆಂಡ್‌ಗೆ ಹಲವು ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದರು.
ಬೌಲಿಂಗ್ ಮಾತ್ರವಲ್ಲದೇ ಟೆಸ್ಟ್‌ನಲ್ಲೂ ಶತಕ ಬಾರಿಸಿ ಬ್ಯಾಟಿಂಗ್ನಲ್ಲಿಯೂ ಗುರುತಿಸಿಕೊಂಡಿದ್ದರಯ. ಇನ್ನೊಂದೆಡೆ ತಮ್ಮ ಜೊತೆಗಾರ ಜೇಮ್ಸ್ ಆ್ಯಂಡರ್ಸನ್ 41ರ ಹರೆಯದಲ್ಲೂ ಕ್ರಿಕೆಟ್ ಆಡುತ್ತಿದ್ದರೆ, ಅವರಿಗಿಂತ ನಾಲ್ಕು ವರ್ಷ ಕಿರಿಯ ಬ್ರಾಡ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವುದು ಅಚ್ಚರಿಯ ಸಂಗತಿಯಾಗಿದೆ.
Comments