ಕ್ಲೋನಿಂಗ್ ಸಸ್ತನಿ ಡಾಲಿ ಕುರಿ ಸೃಷ್ಟಿಕರ್ತ ಸರ್ ವಿಲ್ಮಟ್ ನಿಧನ
- vishwa patha
- Sep 14, 2023
- 1 min read

ಲಂಡನ್: ಮೃತ ಕುರಿಯ ಸಸ್ತನಿ ಗ್ರಂಥಿಯಿಂದ ತದ್ರೂಪು ಕುರಿಯ ಜನನಕ್ಕೆ ಕಾರಣವಾದ ಕ್ಲೋನಿಂಗ್ ತಂತ್ರಜ್ಞಾನವನ್ನು ಮೊದಲ ಬಾರಿಗೆ ಪ್ರಯೋಗಿಸಿ ಡಾಲಿ ಎಂಬ ಕುರಿಯ ಜನನಕ್ಕೆ ಕಾರಣವಾದ ವಿಜ್ಞಾನಿ ಪ್ರೊ. ಸರ್ ಐಯಾನ್ ವಿಲ್ಮಟ್ (79) ನಿಧನರಾಗಿದ್ದಾರೆ. ವಿಲ್ಮಟ್ ಅವರು ಕ್ಲೋನಿಂಗ್ ಕ್ಷೇತ್ರದ ನಿರಂತರ ಸಂಶೋಧನೆಯಿಂದಾಗಿ 1996ರಲ್ಲಿ ಡಾಲಿ ಎಂಬ ತದ್ರೂಪು ಕುರಿಯ ಜನನಕ್ಕೆ ಕಾರಣವಾಗಿದ್ದರು. ಅದರ ಹುಟ್ಟಿಗೆ ಮೃತ ಕುರಿಯ ಗ್ರಂಥಿಯಲ್ಲಿನ ಕೋಶವೇ ಮೂಲವಾಗಿತ್ತು. ವಯಸ್ಕ ಕುರಿಯ ಡಿಎನ್‌ಎ ಅನ್ನು ಮತ್ತೊಂದು ಕುರಿಯ ಅಂಡಾಶಯದೊಳಗೆ ಸೇರಿಸುವ ಕ್ಲೋನಿಂಗ್ ತಂತ್ರಜ್ಞಾನ ಇದಾಗಿತ್ತು. ಈ ಡಿಎನ್ಎ ಮುಂದೆ ಭ್ರೂಣವಾಗಿ ಪರಿವರ್ತನೆಯಾಗಿ ಇನ್ನೊಂದು ಬಾಡಿಗೆ ತಾಯಿ (ಮತ್ತೊಂದು ಕುರಿ)ಯ ಗರ್ಭಕ್ಕೆ ಸೇರಿಸುವ ಮೂಲಕ ಸಸ್ತನಿ ಕುರಿಯನ್ನು ಸೃಷ್ಟಿಸಲಾಗಿತ್ತು. ಈ ಸಂಶೋಧನೆ 20ನೇ ಶತಮಾನದ ಅತಿ ದೊಡ್ಡ ಆವಿಷ್ಕಾರ ಎಂದೇ ಹೆಸರುವಾಸಿಯಾಗಿದೆ.
Comentarios