top of page

ಎಲ್ಲಿದ್ದಾರೆ ಬುದ್ಧ ಬಸವರು?

  • Writer: vishwa patha
    vishwa patha
  • Sep 30, 2023
  • 1 min read

ದೇವರಿಲ್ಲ ಎಂದ ಬುದ್ಧನ

ಗೋರಿಯ ಮೇಲೆ

ಅವನ ಮೂರ್ತಿ ಸ್ಥಾಪಿಸಿ

ದೀಪ ಹಚ್ಚಿ,

ಪ್ರಾರ್ಥನೆಯ ಸಲ್ಲಿಸುತ್ತಿದ್ದೇವೆ.


ಎಲ್ಲಿದ್ದಾನೆ ಬುದ್ಧ?

ನಮ್ಮ ಕಲ್ಲ ಮೂರ್ತಿಯಲ್ಲೊ?

ದೀಪದೊಳಗಿನ ಪ್ರಾರ್ಥನೆಯಲ್ಲೊ?

ಸಿದ್ದಾಂತಗಳಲ್ಲೊ?

ಜೀವನ ಕ್ರಮದಲ್ಲೊ?


ಜಾತಿಯಿಲ್ಲ ಎಂದ

ಬಸವಣ್ಣನ ಕೊರಳ

ಶಿವಲಿಂಗ ಕಿತ್ತೆಸೆದು

ಜಾತಿ ಕಟ್ಟಿದ್ದೇವೆ.

ಧರ್ಮ ಕಟ್ಟಲೂ ಹೊರಟ್ಟಿದ್ದೇವೆ.


ಎಲ್ಲಿದ್ದಾನೆ ಬಸವಣ್ಣ?

ನಮ್ಮ ಜಾತಿಯಲ್ಲೊ?

ಧರ್ಮದಲ್ಲೊ?

ನೀತಿಯಲ್ಲೊ?

ಕರ್ಮದಲ್ಲೊ?

ಹೋರಾಟದಲ್ಲೊ?


ಬುದ್ದ

ನಮ್ಮ ಮೂರ್ತಿಗಳ

ಎದುರ ದೀಪಗಳಲ್ಲಿ ಸುಟ್ಟು ಕರಕಲಾಗಿದ್ದಾನೆ.

ಬಸವಣ್ಣ

ನಮ್ಮ ಜಾತಿಯ ಪರಿಮಿತಿಯಲ್ಲಿ

ಸತ್ತು ಮಲಗಿದ್ದಾನೆ.


-ಮೋಹನ ಕೊಳವಳ್ಳಿ



2 Comments


Guest
Sep 30, 2023

👏👏👏

Like

Guest
Sep 30, 2023

Superb sir

Like
bottom of page