ಪ್ರಜ್ಞಾಪೂರ್ವಕವಾಗಿ ಒಂದು ಜಾತಿಯನ್ನು ನಿಂದಿಸುವುದು ಬೇರೆ...ಸಮಾಜಗರ್ಭದಲ್ಲಿರುವ ಧಾರ್ಮಿಕ ಸಾಮಾಜಿಕ ಭೇದ ನೀತಿ ಸೃಷ್ಟಿಸಿದ ನಿಂದನಾಪದವೊಂದು ಅಚಾನಕ್ಕಾಗಿ ನಮ್ಮ ಬಾಯಿಗಳಿಂದ ಉದುರುವುದು ಬೇರೆ. ಇದು ಜಾತಿಭೇದಾದಿ ಭೇದಗಳನ್ನು ಬದುಕುವ ಸಮಾಜದಲ್ಲಿ ಬದುಕುವವ ಪ್ರಜ್ಞಾಪೂರ್ವಕವಾಗಿ ತಿಳಿಯುವ ಗೋಜಿಗೆ ಹೋಗದವನ ಅಸೂಕ್ಷ್ಮತೆ... ಪ್ರಜಾಪ್ರಭುತ್ವ ಯುಗದಲ್ಲಿ ಇದು ಕೂಡಾ ಅಕ್ಷಮ್ಯ ಅನಕ್ಷರತೆ ...
ಪ್ರಜಾಪ್ರಭುತ್ವ, ವ್ಯಕ್ತಿ ಮತ್ತು ಸಮುದಾಯ ಸ್ವಾತಂತ್ರ್ಯಗಳನ್ನು ಎತ್ತರಿಸಿ ಹಿಡಿಯುತ್ತೇವೆಂದು ಸಂವಿದಾನದ ಮೂಲಕ ಘೋಷಿಸಿಕೊಂಡಿದ್ದರೂ ನಮ್ಮ ಸಾಮಾಜಿಕ ಮನಸ್ತರಗಳಿನ್ಬೂ ಹಳೆಯ ಭೇದ ಮುದ್ರೆ ಗಳಿಂದ ಬಿಡಿಸಿಕೊಂಡಿಲ್ಲ...ಹೀಗಾಗಿ ಅಂತಹ ಪದಪ್ರಯೋಗ ಮಾಡುವವನನ್ನ ಆತನ ಅಸೂಕ್ಷ್ಮತೆ, ಅಸಬ್ಯತೆಗಾಗಿ ವಿಷಾದಿಸಬಹುದು, ಪ್ರಶ್ನಿಸಬಹುದು ರೇಗಬಹುದು... ಎಲ್ಲವನ್ನೂ ಮಾಡಬಹುದು ...
ಎಲ್ಲಿಯವರೆಗೆ? ಆತ ತನ್ನ ನಿಂದನಾ ಕೃತ್ಯವನ್ನು ಬುದ್ದಿಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ಮಾಡಿದ್ದು ಎಂದು ಸಮರ್ಥಿಸುವವರೆಗೆ. ಆದರೆ ತನ್ನ ಅಸೂಕ್ಷ್ಮತೆ ಮತ್ತು ಪ್ರಮಾದಕ್ಕಾಗಿ ಎಚ್ಚೆತ್ತುಕೊಂಡು ವಿಷಾದಿಸಿ ತನ್ನ ವಿಡಿಯೋ ಟ್ವೀಟ್ ಮುಂತಾಗಿ ಎಲ್ಲವನ್ನೂ ತೆಗೆದು ಕ್ಷಮೆ ಕೂಡಾ ಕೇಳುತ್ತಿರುವಾಗಲೂ ಅವನೊಬ್ಬ ಏಕೈಕ ಕೇಡಿಗ ಎಂಬಂತೆ ಮುಗಿಬೀಳುತ್ತಿರುವುದು ವಿಚಿತ್ರವಾಗಿ ಕಾಣುತ್ತಿದೆ...
ಮತ್ತೊಂದು ವಿಚಾರವೆಂದರೆ, ಇಂತಹ ನಿಂದನೆಗಳನ್ನು ಕೇವಲ ಉಪೇಂದ್ರ ಒಬ್ಬನೆ ಮಾಡುತ್ತಿಲ್ಲ... ನಮ್ಮ ಸಮಾಜದ ಪ್ರತಿಯೊಂದು ಜಾತಿಗೆ ಸೇರಿದ ಪ್ರತಿಯೊಬ್ಬನೂ ದಿನನಿತ್ಯ ಇಂತಹ ಅನ್ಯ ಜಾತಿ ನಿಂದನೆಯನ್ನೇ ತಿಂದು , ಅನ್ಯ ಜಾತಿ ನಿಂದನೆಯನ್ನೇ ಕುಡಿದು, ಅನ್ಯ ಜಾತಿ ನಿಂದನೆಯನ್ನೇ ವಿಸರ್ಜಿಸಿ ಬದುಕುತ್ತಿದ್ದಾನೆ ...ಇಲ್ಲದಿದ್ದಲ್ಲಿ ಅಂತರ್ಜಾತಿ ಮದುವೆಗಳನ್ನು ಮರ್ಯಾದೆ ಗೇಡು ಮದುವೆಗಳೆಂದು ಈ ಸಮಾಜ. ಪರಿಗಣಿಸುತ್ತಿರಲಿಲ್ಲ. ಮದುವೆಯಾದ ಮದು ಮಕ್ಕಳನ್ನು ಮನೆಯವರೇ ಕತ್ತು ಹಿಸುಕಿ ಸಾಯಿಸುತ್ತಿರಲಿಲ್ಲ.
ಅಂತಹ ಪದಪ್ರಯೋಗಕ್ಕಾಗಿ ಉಪೇಂದ್ರ ಕ್ಷಮೆ ಕೇಳದಿದ್ದಾಗ ಅಥವಾ ತನ್ನ ಮಾತುಗಳನ್ನು ದಾರ್ಷ್ಯದಿಂದ ಸಮರ್ಥಿಸಿದ್ದಾಗ ಅವನ ವಿರುದ್ದ ಪ್ರತಿಭಟನೆ ಅಥವಾ ದೂರು ಇಂತಹ ಕ್ರಮಗಳಿಗಿಳಿಯುವುದು ಸೂಕ್ತವಾಗಿ ಕಾಣುತ್ತಿತ್ತು ...ನೆನ್ನೆ ಮೊನ್ನೆ ಮಧ್ಯಪ್ರದೇಶದಲ್ಲಿ ಬ್ರಾಹ್ಮಣನೊಬ್ಬ ತಳ ಜಾತಿಯವನೊಬ್ಬನ ಮೇಲೆ ರಾಜಾರೋಷದಿಂದ, ಬೇಕೆಂದೇ, ಪ್ರಜ್ಞಾಪೂರ್ವಕವಾಗಿ ಮೂತ್ರ ವಿಸರ್ಜಿಸಿ ಅಪಮಾನ ಮಾಡಿದ್ದು ಅತ್ಯಂತ ದಾರುಣ ಅನಾಗರಿಕ ಕೃತ್ಯ … ಅದರ ವಿರುದ್ದ ಈ ಪ್ರಮಾಣದ ದೂರು ಅಥವಾ ಪ್ರತಿಭಟನೆಗಳು ನಡೆದಿದ್ದರೆ ಎಫೈಆರ್ಗಳು ರಿಜಿಸ್ಟರ್ ಆಗಿದ್ದಿದ್ದರೆ ನಮ್ಮ ಸಮಾಜ ನಿಜವಾದ ಅರ್ಥದಲ್ಲಿ ಜಾಗೃತವಾದದ್ದು ಎಂದು ತಿಳಿಯಬಹುದಾಗಿತ್ತು...
ಜಾತಿಯ ಹೆಸರುಗಳನ್ನು ದಂಡಿಯಾಗಿ ಬೈಗುಳಗಳಾಗಿ ಬಳಸುವ ಸಮಾಜ ನಮ್ಮದು
ಹೆಂಗಸರನ್ನು ಸೋಳೆ, ಬೋಳಿ, ಬಡ್ಡಿ, ನಿನ್ನವ್ವನ್, ನಿನ್ನಕ್ಕನ್, ನಿನ್ ತಾಯಿನಾ, ನಿಮ್ಮಜ್ಜಿ, ನಿನ್ ಹೆಂಡ್ರನ್... ಬೋಸುಡಿ, ಬಹನ್ಚೂತ್, ಹೀಗೆ ಲೈಂಗಿಕ ಅತಿಕ್ರಮಣದ. ಅಕ್ರಮಣಕಾರಿ ಪದಗಳನ್ನು ಓತಪ್ರೋತವಾಗಿ ಬೈಗುಳಗಳಲ್ಲಿ ನಮ್ಮ ಸಮಾಜದ ಅರ್ದಕ್ಕರ್ದ ಇರುವ ಸ್ತ್ರೀ ಸಮುದಾಯವನ್ನು ನಿತ್ಯವೂ ತಂದು ನಿಂದಿಸುವ ಸಮಾಜ ನಾವಾಗಿದ್ದೇವೆ.....
ಇದಕ್ಜಾಗಿ ಯಾರನ್ನು, ಎಷ್ಟು ಜನರನ್ನು ನ್ಯಾಯದ ಕಟಕಟೆಗೆ ಎಳೆದಿದ್ದೇವೆ ? ಎಳೆಯುತ್ತಿದ್ದೇವೆ ?... ಎಷ್ಟು ಎಫೈಆರ್ ಗಳು ಇಲ್ಲಿ ದಾಕಲಾಗುತ್ತಿವೆ ?
"ಯಾಕೆ ಬರೆ ಹಣೆ …ಬೊಟ್ಟಿಟ್ಟಿಲ್ಲವಲ್ಲ ? ಗಂಡಿಲ್ವ ? '' ಎಂದು ಗದರಿದವನು ಬ್ರಾಹ್ಮಣನಲ್ಲ ಪರಿಶಿಷ್ಟ ಸಮುದಾಯಕ್ಜೆ ಸೇರಿದ ಸಂಸದ . ಕೋಲಾರದ ಮುನಿಸ್ವಾಮಿ .. ಅತನ ವಿರುದ್ದ ಎಷ್ಟು ಪ್ರತಿಭಟನೆ ಎಷ್ಟು ಎಫೈಆರ್ ಗಳು ದಾಕಲಾದವು ?..
ಮುನಿಸ್ವಾಮಿ ಅಚಾನಕ್ಕಾಗಿ , ಅಪ್ರಜ್ನಾಪೂರ್ವಕವಾಗಿ , ಬಾಯಿ ತಪ್ಪಿ ಅಂದಿದ್ದಲ್ಲ ಆ ಮಾತು ... ತಾನು ಏನನ್ನು ಅನ್ನುತ್ತಿದ್ದೇನೆಂಬ ಪೂರ್ಣ ಅರಿವಿನಿಂದ ಅಂದ ಮಾತು ಅದು... ಅದು ಹೆಣ್ಣಿನ ಬಗ್ಗೆ ಆತ ಪ್ರಜ್ನಾಪೂರ್ವಕವಾಗಿ ಹೊಂದಿರುವ. ಸಮಾಜೋ ದಾರ್ಮಿಕ, ಸ್ವರೂಪದ ನಿಲುವು ಅದು ... ಅದನ್ನು ನಮ್ಮಲ್ಲೆಷ್ಟು ಸಂಗಟನೆಗಳು ಅದರ ತಾರ್ಕಿಕ ಅಂತ್ಯಕ್ಕೊಯ್ದು ಪ್ರಶ್ನಿಸಿದೆವು?.
ನಾನು ಉಪೇಂದ್ರನನ್ನು ಸಮರ್ತಿಸುತ್ತಿಲ್ಲ... ಆತ ತಡಬಡಾಯಿಸಿ ಎಚ್ಚೆತ್ತುಕೊಂಡು ತನ್ನ ಪ್ರಮಾದ ಅರಿತುಕೊಂಡು ಕ್ಷಮೆಯಾಚನೆ ಮಾಡಿದ ಮೇಲೂ ಅವನ ಮೇಲೆ ಮುಗಿಬೀಳುವುದರಲ್ಲಿರುವ. ನಮ್ಮ ನ್ಯಾಯಿಕ ಅಸಮತೋಲನದತ್ತ. ಗಮನಸೆಳೆಯುತ್ತಿದ್ದೇನೆ ...
ನಮ್ಮ ಸಮಾಜ ಗರ್ಭದಲ್ಲಿರುವ. ವಾಚ್ಯ ರೂಪದ ಪಾಪಗಳು... ಬಂದಿರುವುದೇ ನಿತ್ಯದ ನಡೆನುಡಿಯಲ್ಲಿ ಕ್ರಿಯೆಯಲ್ಲಿ ನಿತ್ಯವೂ ಪಾಪಿಯಾಗಿರುವ ಸಮಾಜದಿಂದ. ಅಂತಹ ಸಮಾಜ, ಕೇವಲ ಮಾತಿನಲ್ಲಿ ಸುಸಂಸ್ಕೃತವಾಗಲು ಸಾದ್ಯವೇ ಇಲ್ಲ… ಉಪೇಂದ್ರನ ಮಾತು ವಾಸ್ತವವಾಗಿರುವ ಪಾಪಕೂಪದಿಂದ ಚಿಮ್ಮಿಬಂದ ಮಾತು ...
ಇನ್ನೊಂದು ಮುಕ್ಯ ವಿಚಾರವೆಂದರೆ, ಪ್ರತಿಭಟನೆ ಗಿಳಿದಿರುವ ಜನರೆಂದೂ ಊರು ಮತ್ತು ಹೊಲಗೇರಿಗಳನ್ನು ಒಂದು ಮಾಡಿ ಬೆಸೆಯುವ ಆಂದೋಲನವನ್ನು ಕೈಗೆತ್ತಿಕೊಳ್ಲುವುದಿರಲಿ ಆ ನಿಟ್ಟಿನ ಚಿಂತನೆಯನ್ನೂ ನಡೆಸಿದ್ದು ಕಮ್ಮಿ... ಆಗ್ರಹವನ್ನೂ ಸಮಾಜದ ಎದುರು ಇಟ್ಟಿದ್ದು ಕಮ್ಮಿ...
ಇವತ್ತು ಸಂವಿದಾನ ಜಾರಿಗೆ ಬಂದ ದಿನದಿಂದಲೂ ಈ ದೇಶದ. ಶಾಸಕಾಂಗದಲ್ಲಿ ಶೇಕಡಾ ಇಪ್ಪತ್ತೈದು ಭಾಗ. ಪರಿಶಿಷ್ಟರಿಗೆ ಮೀಸಲಾಗಿದೆ... ಅಂದರೆ ನಿರ್ಣಾಯಕ ಶಾಸನಕರ್ತರು ಅವರೆ ಆಗಿರುವಾಗಲೂ ಊರು ಹೊಲಗೇರಿಗಳನ್ನು ಬೆಸೆಯುವ. ಆ ಮೂಲಕ ಅಸ್ಪೃಶ್ಯ ತೆಯನ್ನು ನಾಮಾವಶೇಶ ಮಾಡುವ. ಕಾಯ್ದೆಯನ್ನು ರೂಪಿಸಲಾಗಿಲ್ಲ.
ಇದು ನಮ್ಮ ಸಮಾಜದ ಯಥಾಸ್ಥಿತಿ ವಾದಿತ್ವವನ್ನು ತೋರುತ್ತದೆ… ಈ ಬಗ್ಗೆ ಒತ್ತಾಯವನ್ನು ನಮ್ಮ. ಪರಿಶಿಷ್ಟ ಹಿತಕ್ಕಾಗಿ ದುಡಿಯುವ ಸಘಟನೆಗಳು ಕೂಡಾ ಮಾಡಿದ್ದಿಲ್ಲ…
ಈ ಕಾರಣಕ್ಕಾಗಿಯೇ ನಾನು ಅನೇಕ ಸಲ ಪ್ರಶ್ನಿಸಿದ್ದೇನೆ: ಸಮಾಜ ತಯಾರು ಮಾಡಿರುವ ಸಲ್ಲದ ಗಾದೆಯನ್ನು ಅಕಸ್ಮಿಕವಾಗಿ ಉಸಿರಿದ, ಆ ದೃಷ್ಟಿಯಿಂದ ಅಸೂಕ್ಷ್ಮ ವ್ಯಕ್ತಿಯಾದ ಉಪೇಂದ್ರನನ್ನು ಅವನು ಬ್ರಾಹ್ಮಣ. ಎಂಬ ಕಾರಣಕ್ಕೆ ಅವನ ಮೇಲೆ ಮುಗಿಬಿದ್ದಿರುವವರು... ಕೇಂದ್ರದ. ಬ್ರಾಹ್ಮಣ ರಾಜಕಾರಣದ ಜೊತೆ ಜೊತೆಗೆ ಮೈ ಮನಸ್ಸು ಬೆಸೆದಿರುವ. ತಮ್ಮ ಸಮುದಾಯಗಳ ಸಂಸದರನ್ನು ಇದುವರೆವಿಗೂ ಯಾಕೆ ಪ್ರಶ್ನಿಸಿಲ್ಲ… ಕನಿಷ್ಟ ಪಕ್ಷ ಸರ್ಕಾರ ಬ್ರಾಹ್ಮಣವಾದಿಯಾಗಿರುವವರೆಗೆ ತನ್ನ ಬೆಂಬಲವನ್ನು ಕೊಡಲು ಸಾದ್ಯವಿಲ್ಲ ಎಂದು ಸಂಬಂಧವನ್ನು ಕಡಿದುಕೊಳ್ಲುವ. ಬೆದರಿಕೆ ಹಾಕುತ್ತಿಲ್ಲ. ಎಂದು ನಾನು ಅನೇಕ ಸಲ ಪ್ರಶ್ನಿಸಿದ್ದೇನೆ.
ಇಂತಹ ಏಕಪಕ್ಷೀಯವಾದ, ಆತ್ಮಾವಲೋಕನ ಹಾಗೂ ಆತ್ಮವಿಮರ್ಶೆ ಇಲ್ಲದ, ಆರೋಪ ಆಕ್ರಮಣಗಳಿಂದ ನಮ್ಮ ಭೇದಗ್ರಸ್ತ ಸಮಾಜವನ್ಜು ಹಸನುಮಾಡಲಾರೆವು …
* ಕೆಪಿಎನ್ / 14-08-2023
Comments