ಬಾಲಿವುಡ್ ನಲ್ಲಿ ದಾಖಲೆ ಬರೆದ ‘ಜವಾನ್’: ಒಂದೇ ದಿನಕ್ಕೆ ₹129 ಕೋಟಿ
- vishwa patha
- Sep 8, 2023
- 1 min read

ಮುಂಬೈ: ಗುರುವಾರ ತೆರೆ ಕಂಡ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಜವಾನ್ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಒಂದೇ ದಿನದಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹129.6 ಕೋಟಿ ಬಾಚಿದೆ.
ಈ ಕುರಿತಂತೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ಇಷ್ಟು ದೊಡ್ಡ ಪ್ರೀತಿ ನೀಡಿದ್ದಕ್ಕೆ ಧನ್ಯವಾದಗಳು, ಇದು ಕೇವಲ ಆರಂಭ ಮಾತ್ರ ಎಂದು ಬರೆದುಕೊಂಡಿದೆ.
ಅಂತರರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ ಜವಾನ್ ಉತ್ತಮ ಗಳಿಕೆ ಮೂಲಕ ವಿದೇಶಗಳಲ್ಲಿಯೂ ಶಾರುಖ್ ತಮ್ಮ ಸಾರ್ವಭೌಮತೆಯನ್ನು ಸಾಬೀತು ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ 3,98,030 ಡಾಲರ್(₹2.11 ಕೋಟಿ), ನ್ಯೂಜಿಲೆಂಡ್ 79,805 ಡಾಲರ್( ₹ 39.13 ಲಕ್ಷ), ಜರ್ಮನಿಯಲ್ಲಿ ₹1.3 ಕೋಟಿ, ಬ್ರಿಟನ್‌ನಲ್ಲಿ ₹2.16 ಕೋಟಿ ಗಳಿಕೆ ಕಂಡಿದೆ ಎಂದು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಹೇಳಿಕೊಂಡಿದೆ.
コメント