top of page
Writer's picturevishwa patha

2ನೇ ವಿಶ್ವ ಮಹಾಯುದ್ಧದ ವೈಮಾನಿಕ ಬಾಂಬ್‌ ನಿಷ್ಕ್ರಿಯ



ಸಿಂಗಪುರ: ಅಪ್ಪರ್‌ ಬುಕಿಟ್ ತಿಮಾಹ್ ಪ್ರದೇಶದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ 100 ಕೆ.ಜಿ. ಭಾರದ ಎರಡನೇ ಮಹಾಯುದ್ಧ ಕಾಲದ ವೈಮಾನಿಕ ಬಾಂಬ್‌ ಅನ್ನು ಮಂಗಳವಾರ ನಿಷ್ಕ್ರಿಯಗೊಳಿಸಲಾಗಿದೆ. ಬಾಂಬ್‌ ಪತ್ತೆಯಾದ ಸ್ಥಳದಿಂದ 4 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಿ ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಎರಡು ಸ್ಫೋಟಕಗಳನ್ನು ಬಳಸಿ ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಿದ್ದು, ಇನ್ನು ಬಾಂಬ್ ಗಳು ಇರಬಹುದು ಎಂದು ಅಧಿಕಾರಿಗಳು ಬಾಂಬ್ ಸಿಕ್ಕ ಪ್ರದೇಶವನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸ್ಫೋಟದ ತೀವ್ರತೆಯನ್ನು ಕಡಿಮೆ ಮಾಡಲು ಬಾಂಬ್‌ನ ಸುತ್ತಲೂ ಮರಳಿನ ಚೀಲಗಳನ್ನು ಮತ್ತು ಕಾಂಕ್ರಿಟ್‌ ಬ್ಲಾಕ್‌ಗಳನ್ನು ಇರಿಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಬೇರೆಡೆಗೆ ಸ್ಥಳಾಂತರಿಸಲಾಗಿದ್ದ ನಾಗರಿಕರು ಈಗ ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






Comments


bottom of page