ಶೂದ್ರ
- vishwa patha
- Aug 18, 2023
- 1 min read

ಬ್ರಾಹ್ಮಣ
ಲಿಂಗಾಯತನ
ಕಾಮ ತೃಷೆಗೆ ಬಲಿಯಾಗಿ
ತೋಟ, ಗದ್ದೆಗಳಲ್ಲಿ
ಹೊಲಗೇರಿ ಗುಡಿಸಲಲ್ಲಿ
ಮೈಬೆಚ್ಚಗೆ ಮಾಡೊ
ಬೆತ್ತಲೆಯ
ಆಲಿಂಗನದ ಸರಸದಲಿ
ಅವಳು
ರತಿ ಸ್ಪರ್ಶಪ್ರಿಯಳಂತೆ,
ಸಂಸ್ಕಾರ ಸಂಸಾರಕ್ಕೆ ಮಾತ್ರ
ಸ್ಪರ್ಶಹೀನಳಂತೆ!
ಮೂರ್ತಿ ಕೆತ್ತಬೇಕಾದವನು
ಶೂದ್ರನಂತೆ,
ಪೂಜೆ ಮಾತ್ರ
ಪುರೋಹಿತನದ್ದೆ ಆಗಬೇಕಂತೆ!
ಮಡಿಯಂತೆ ಮಡಿ
ನೆಲ ಬಗೆದು ಜಲ ತೆಗೆವಾಗಿಲ್ಲದ ಮಡಿ,
ನೀರು ಕುಡಿವಾಗ ಬಂತಂತೆ!
ಜೋಳಿಗೆ ಹೊತ್ತು
ಜನಿವಾರದವ ಬೇಡಿದರೆ
ಭಕ್ತಿ, ಯುಕ್ತಿ, ದೈವ ಸಂಭೂತನಂತೆ,
ಶೂದ್ರ ಬೇಡಿದಾಗ ಮಾತ್ರ ಭಿಕ್ಷೆಯಂತೆ!
ರಾಮಯಾಣ ಬರೆದವ
ಶೂದ್ರನಂತೆ,
ಅವನ ಸೃಷ್ಠಿ ದೇವನಂತೆ!
ಲೇಖಕರು: ಮೋಹನ ಕೊಳವಳ್ಳಿ
Place: ಕೊಳವಳ್ಳಿ, ಶಿವಮೊಗ್ಗ
Education: MA in English, B.Ed, PGDT & PGDKJ
Profession: Lecturer
Hobbies: Reading & writing poem & articles
But, how to eliminate caste system? It's roots are so Deep.
It protects the reality of our society