top of page

ಪ್ರವಾಸ

  • Writer: vishwa patha
    vishwa patha
  • Sep 28, 2023
  • 1 min read

ಪ್ರವಾಸಗಳ

ಪ್ರಹಸನದಲ್ಲಿ

ಕೂತು ನೋಡುವರೆಷ್ಟೊ

ಅಭಿನಯಿಸುವರೆಷ್ಟೊ

ದಿಗ್ದರ್ಶನ ಯಾರದ್ದೊ!?


ಒಂದಲ್ಲ ಒಂದು ದಿನ

ನಾವೆಲ್ಲರು ಹೋಗಲೆ ಬೇಕಾದ

ದೂರದ ಊರಿನ ಪ್ರವಾಸವೊಂದಿದೆ.

ಎಲ್ಲ ಸಮಯದ ಅಭಾವವನ್ನು

ಬದಿಗೊತ್ತಿ, ಇಲ್ಲ! ಬದಿಗೊತ್ತಿಸಿ

ಕರೆದೊಯ್ಯುವ

ಪ್ರವಾಸದ ದಿಗ್ದರ್ಶಕನೊಬ್ಬಿದ್ದಾನೆ.

ನಾವು ಮೂಕ ಪ್ರೇಕ್ಷಕರಷ್ಟೆ.


ಪಾತ್ರಗಳೆಲ್ಲವು

ಅಂತ್ಯದೆಡೆಗೆ ಸಾಗುತ್ತವೆ.

ನಿಶಾಚರವಾಗುತ್ತ

ನಿಷ್ಕ್ರಿಯಗೊಳ್ಳುವತ್ತ

ವಿನಮೃವಾಗಿ ಬಾಗಿ ನಿಲ್ಲುತ್ತವೆ

ಸಮುದ್ರದ ದಡದ ಮೇಲಿನ ಮರಳು ಗುಪ್ಪೆಯಾಗಿ.


ಒಂದೊಂದೆ ಅಲೆಯ ರಬಸಕ್ಕು

ಒಂದೊಂದೆ ಗುಪ್ಪೆಗಳು ಕರಗಿ

ಸಾಗರದ ಬಾಯಿ ಸೇರುತ್ತವೆ.


ಗುಪ್ಪೆಗಳು ಕಾಲಾಕೃತಿಗಳಾದರೆ

ಒಂದಿಷ್ಟು ದಿನದ ನೆನಪು.

ಗುಪ್ಪೆಗಳು ಗುಪ್ಪೆಗಳಾಗೆ ಕರಗಿದರೆ

ಒಂದಿಷ್ಟು ಕಣ್ಣೀರು.


ಕರಗಿದ ಮರಳಗುಪ್ಪೆಯ ಮೇಲೆ

ಮತ್ತೊಂದು ಗುಪ್ಪೆ ಚಿಗುರಿ ನಿಲ್ಲುತ್ತದೆ

ಕಿನಾರೆಯ ಸೊಬಗ ಸವಿಯುತ್ತ

ಬೊರ್ಗರೆವ ಅಲೆಗಳಿಗೆ ನಡುಗುತ್ತ.


-ಮೋಹನ ಕೊಳವಳ್ಳಿ



1 Comment


Geeta Hegde
Geeta Hegde
Sep 29, 2023

Tumba chennagi bareyutteeri, sir..super

Like
bottom of page