ರಾಜಕಾಣಿಗಳನ್ನ ರಾಜಕಾರಣಿಯನ್ನಾಗೆ ನೋಡುವ ನಾನು ಬಯ್ಯಪುರರನ್ನ ಇಷ್ಟು ಪ್ರೀತಿಸಲು ಕಾರಣವೇನು?
- vishwa patha
- Dec 1, 2023
- 3 min read

ಪ್ರೀತಿಯ ಅಮರೇಗೌಡ ಪಾಟೀಲ್ ಬಯ್ಯಪುರನ್ನ ಒಬ್ಬ ದೀಮಂತ ಜನನಾಯಕ ಅನ್ನಲೆ, ಹೃದಯವಂತ ಅನ್ನಲೆ, ಕರುಣಾಮಯಿ ಅನ್ನಲೆ, ಇಲ್ಲಾ ನನ್ನ ಭಾವನೆಗಳಲ್ಲಿ ನನ್ನ ದೊಡ್ಡಪ್ಪ, ಬಂಧು ಅನ್ನಲೆ ತಿಳಿಯುತ್ತಿಲ್ಲ ಆದರೆ ಅವರ ಅಪ್ಪಟ ಅಭಿಮಾನಿಯೊಂತು ಹೌದು. ಐದು ಬಾರಿ MLA ಮಾಜಿ ಸಚಿವರ ಎಂಬ ದರ್ಪ, ಗರ್ವ ಒಂಚೂರು ಕಾಣ ಸಿಗುವುದಿಲ್ಲ, ತೀರ ಸರಳ ಮತ್ತು ಜನರ ಮಧ್ಯೆಯೆ ಇರಬೇಕೆನ್ನುವ ರಾಜಕಾರಣಿ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 2022 ನೇಮರ ನೇಮಕಾತಿಗೆ ಸಂಭಂದಿಸಿದಂತೆ ನನ್ನದೆ ಒಂದು ಹತ್ತು ಸಾವಿರ ಅಭ್ಯರ್ಥಿಗಳ ತಂಡವನ್ನು ಕಟ್ಟಿ ಅದರಲ್ಲಿ ನಾವೆ ಒಂದಿಷ್ಟು ಅಭ್ಯರ್ಥಿಗಳು ಮುಂದಾಳತ್ವವನ್ನು ವಹಿಸಿಕೊಂಡು, ಅಂದಿನ ಮತ್ತು ಇಂದಿನ ಶಿಕ್ಷಣ ಸಚಿವರಿಂದ ಹಿಡಿದು ಹಲವು ಮಂತ್ರಿಗಳು, ರಾಜಾಕೀಯ ನಾಯಕರುಗಳನ್ನು ಬೇಟಿಯಾಗಿ ನಮ್ಮ ನೇಮಕಾತಿಯನ್ನು ಮುಗಿಸುವಂತೆ ಮನವಿ ಪತ್ರಗಳನ್ನು ಕೊಟ್ಟರು ಪ್ರಯೋಜನಕ್ಕೆ ಬಾರದೆ ನ್ಯಾಯಾಲಯದಲ್ಲಿ ಇದ್ದ ನೇಮಕಾತಿ ವ್ಯಾಜ್ಯ ಹಾಗೆ ಮುಂದುವರೆಯುತ್ತಾ ಹೋಗುತ್ತಿತ್ತು. ಕೊನೆಗೆ ಬೇಸತ್ತು ಅನಿವಾರ್ಯವಾಗಿ ಅನಿರ್ಧಿಷ್ಟಾವದಿ ಧರಣಿಯನ್ನು ಫ್ರೀಡಂ ಪಾರ್ಕ್ ನಲ್ಲಿ ಮಾಡಿದೆವು ಅಲ್ಲಿಗೆ ಹೊಸದಾಗಿ ಸಚಿವರಾದ ಶಿಕ್ಷಣ ಸಚಿವ ಸನ್ಮಾನ್ಯ ಮಧು ಬಂಗಾರಪ್ಪರವರು ಬಂದು ಧರಣಿನಿರತ ಅಭ್ಯರ್ಥಿಗಳಿಗೆ ಸಮದಾನದ ಮಾತುಗಳನ್ನ ಹೇಳಿ ಜೊತೆಗೆ ಇಲಾಖೆ ಅಧಿಕಾರಿಗಳ ಜೊತೆ ಒಂದು ಮೀಟಿಂಗ್ ಮಾಡಿಸಿದರು ಆದರೂ ಕೂಡ ನ್ಯಾಯಾಲದಲ್ಲಿದ್ದ ಕೇಸ್ ಹಿಯರಿಂಗ್ ಗಳು ತಿಂಗಳುಗಟ್ಟಲೆ ಮುಂದೆ ಹೋಗುತ್ತಲೆ ಇತ್ತು.
ಅಂದು ಕೊಪ್ಪಳದ ಅಭ್ಯರ್ಥಿಯಾದ ಚಂದ್ರು ಹೊಸಮನಿಯಿಂದ ಸನ್ಮಾನ್ಯ ಅಮರೇಗೌಡರ ಪರಿಚಯವಾಯಿತು. ಅವರ ನೇತೃತ್ವದಲ್ಲಿ ಕಾನೂನು ಸಚಿವರಾದ ಸನ್ಮಾನ್ಯ ಹೆಚ್ಕೆ ಪಾಟೀಲ್ ರನ್ನ ಬೇಟಿಯಾಗಿಯಾದೆವು ಆನಂತರ ಅವರು ನಮ್ಮನ್ನ, ಶಿಕ್ಷಣ ಇಲಾಖೆ ಸಚಿವರು ಅಧಿಕಾರಗಳನ್ನೊಳಗೊಂಡಂತೆ ಮೀಟಿಂಗ್ ಮಾಡಿ ಮಹದುಪಕಾರ ಮಾಡಿದರು. ಆ ನಂತರ ಕೋರ್ಟ್ ನಲ್ಲಿ ಕೇಸ್ ಸ್ವಲ್ಪ ಚುರುಕುಗೊಳ್ಳುತ್ತ ಸಾಗಿತು ಹಾಗೆ ಪ್ರತಿ ಬಾರಿಯು ಅಮರೇ ಗೌಡ ಪಾಟಿಲರು ನಮ್ಮ ಜೊತೆಗೆ ನಿಂತು ಶಿಕ್ಷಣ ಸಚಿವರು, ಕಾನೂನು ಸಚಿವರ ಮೇಲೆ ವತ್ತಡವನ್ನು ತಂದು ಇಂದು ಎಲ್ಲವು ಸುಕಾಂತ್ಯವಾಗಿ ಹಲವು ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆದಿದ್ದಾರೆ ಇನ್ನ ಕೆಲವೆ ದಿನಗಳಲ್ಲಿ ಉಳಿದವರು ಪಡೆಯಲಿದ್ದಾರೆ.
ಇದೆಲ್ಲದರ ಹೊರತಾಗಿ ನನಗೆ ಅಮರೇಗೌಡ ಪಾಟೀಲ್ ಬಯ್ಯಪುರವರು ಯಾಕೆ ಅಷ್ಟು ಮೆಚ್ಚು ಮತ್ತು ಪ್ರೀತಿ ಗೌರವ ಎಂದರ.
ನಮ್ಮ ಕೆಲಸಕ್ಕಾಗಿಯೆ ದೂರದ ಕೊಪ್ಪಳದಿಂದ ಎಷ್ಟೊ ಬಾರಿ ಪ್ರಯಾಣ ಮಾಡಿ ಬಂದಿದ್ದಾರೆ.
ಒಮ್ಮೆ ಕಾನೂನು ಸಚಿವರನ್ನು ಬೇಟಿಯಾಗಲು ಹೋದಾಗ ನಾವು ಕಾನೂನು ಸಚಿವರ ಕಛೇರಿಯಲ್ಲಿ ಕಾಯುತ್ತಿದ್ದೆವು ಕಾನೂನು ಸಚಿವರು ಕೆಲಸದ ವತ್ತಡಗಳಿಂದ ಕಛೇರಿಗೆ ಬರುವ ಸಮಯ ತಡವಾಗುತ್ತದೆ ಎಂಬ ಮಾಹಿತಿ ಬಂತು ಹಾಗೆ ಅಮರೇಗೌಡರಿಗೆ ಆರೋಗ್ಯ ಸರಿ ಇರಲಿಲ್ಲ ಕೂಡ ನಾವು ಮರುದಿನ ಕಾನೂನು ಸಚಿವರನ್ನ ಬೇಟಿಯಾಗಲು ನಿರ್ಧರಿಸಿ ಹೊರಬಂದೆವು ಆದರೆ ಅಮರೇಗೌಡರು ಕರೆ ಮಾಡಿ ಎಲ್ಲಿದಿರ? ಬರ್ರಪ್ಪಾ ಕಾನೂನು ಸಚಿವರು ಕರಿತಿದರೆ ಎಂದು ತಮ್ಮ ಅನಾರೋಗ್ಯದ ಮದ್ಯದಲ್ಲು ಬಂದು ನಮ್ಮ ಜೊತೆ ನಿಂತಿದಕ್ಕಾಗಿ. ಅಷ್ಟೆ ಅಲ್ಲ ಕೆಲವೊಮ್ಮೆ ಕಾನೂನು ಸಚಿವರ ಬೇಟಿಗಾಗಿ ನಮ್ಮ ಜೊತೆ ಕೂತು ಅವರು ಗಂಟೆಗಟ್ಟಲೆ ಕಾದಿದ್ದಾರೆ ಆ ಸಮಯದಲ್ಲಿ ಅವರ ರಾಜಕೀಯ ಅನುಭವ ಮತ್ತು ಶಿಕ್ಷಣದ ಅಗತ್ಯದ ಬಗ್ಗೆ ಚರ್ಚಿದ್ದಾರೆ. ನಾನು ಒಬ್ಬ ಅಭ್ಯರ್ಥಿಯಾಗಿ ನೇಮಕಾತಿಯ ವಿಷಯದ ಹೋರಾಟದ ಎಲ್ಲಾ ಜವಬ್ದಾರಿಯನ್ನು ಹೊತ್ತುಕೊಂಡಿದ್ದರು ನ್ಯಾಯಾಲಯದ ತೀರ್ಮಾನದ ಮತ್ತು ಅಲ್ಲಿ ನಡೆದ ಬೆಳವಣಿಗೆಗಳನ್ನು ನನ್ನ ಸ್ನೆಹಿತರು ಕರೆಮಾಡಿ ಹೇಳಿದಾಗ ಮಾತ್ರ ತಿಳಿದುಕೊಳ್ಳುತ್ತಿದ್ದೆ ಆದರೆ ಬಯ್ಯಪುರರವರು ಪ್ರತಿ ಹಿಯರಿಂಗ್ ನಂತರ ಕರೆ ಮಾಡಿ ನ್ಯಾಯಾಲಯದಲ್ಲಾದ ಬೆಳವಣಿಗೆಯ ಬಗ್ಗೆ ಮಾಹಿತಿ ಕೇಳುತ್ತಿದ್ದರು.
ಒಮ್ಮೆ ಹಿಯರಿಂಗ್ ನಲ್ಲಿ ಇಡಿ ನೋಟಿಪಿಕೇಶನ್ ಕ್ವಾಶ್ ಮಾಡಿ ಎಂದರು ಎಂದಾಗ ಬಯ್ಯಪುರರವರು ಗಾಬರಿಯಾಗಿ ಹೋಗಿದ್ದರು. ಸಮಸ್ಯೆಯ ಕುರಿ ಮದ್ಯರಾತ್ರಿ ಕರೆಮಾಡಿ ಮಾಡಿದಾಗಲು ಧಣಿವರಿಯದಂತೆ ನಮ್ಮೊಂದಿಗೆ ಮಾತಾಡಿದ್ದಾರೆ. ಅಷ್ಟೆ ಏಕೆ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಂಧುತ್ವ ಮಾಡಿಸುವ ಬಗೆಗಿನ ಗೊಂದಲಗಳನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರಿಂದ ನಿರ್ದೇಶನವನ್ನು ಮಾಡಿಸಿದ್ದಾರೆ. ಇದಕ್ಕೂ ಮೊದಲು ಕಲ್ಯಾಣ ಕರ್ನಾಟಕ ಭಾಗದ 371j ಅನ್ವಯದಿಂದಾದ ಕಾನೂನು ಸಮಸ್ಯೆಯಲ್ಲಿ ನ್ಯಾಯಲಯ ನೇಮಕಾತಿ ಮುಂದುವರೆಸಲು ಅವಕಾಶಕೊಟ್ಟಾದ ಮೇಲೆ ಬಯ್ಯಪುರರವರಿಗೆ ಕರೆಮಾಡಿ ದನ್ಯವಾದ ಅರ್ಪಿಸಿದಾಗ ಅವರು ಬಿಡಪ್ಪಾ ಒಳ್ಳೆಯ್ತು ಎಲ್ಲರಿಗು ಆದರೆ ಈ GM ಸಿಂಧುತ್ವ ಒಂದು ಹಾಗೆ ಉಳಿತು ನೋಡು ಇವತ್ತು CM ಬೇಟಿಯಾಗಿದಿನಿ ನೋಡುಮು ತಡಿ ಎಂದಿದ್ದರು. ಇಷ್ಟು ಅವಿರತವಾಗಿ ನಮಗೆ ಬೆನ್ನೆಲಬುಗಿ ನಿಂತಿದ್ದಾರೆ. ಹಾಗೆ ನಮ್ಮ ಶಿಕ್ಷಣ ಸಚಿವರಾದ ಮಧಣ್ಣನ ಬಗ್ಗೆಯು ಅಷ್ಟೆ ಪ್ರೀತಿಯನ್ನು ಇರಿಸಿಕೊಂಡಿದ್ದಾರೆ. ನಿನ್ನೆ ಕೂಡ ಶಿಕ್ಷಣ ಸಚಿವರನ್ನು ಬೇಟಿಯಾದಾಗ ಇನ್ನೂ ಹೆಚ್ಚು ಶಿಕ್ಷಕರ ನೇಮಕಾತಿ ನಿಮ್ಮ ಅವಧಿಯಲ್ಲಿಯಾಗ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ನಾನೊಬ್ಬ ಶಿವಮೊಗ್ಗದ ಅಭ್ಯರ್ಥಿ ಬಯ್ಯಪುರರವರಿಗೆ ನನ್ನಿಂದ ಕಿಂಚಿತ್ತು ಲಾಭವಿಲ್ಲ ಆದರು ಅಷ್ಟೊಂದು ಪ್ರೀತಿ ಬೆಂಬಲ ಏಕೆ? .
ಕಾರಣ ಇಷ್ಟೆ ಅವರ ರಾಜಕೀಯದ ಹೊರತಾದ ಸಾಮಾಜಿಕ ಮತ್ತು ಶೈಕ್ಷಣಿಕ ಚಿಂತನೆಗಳು. ಬಯ್ಯಪುರವರು ನಂಬಿರುವ ತತ್ವ ಒಂದೆ ಒಬ್ಬ ಕೆಟ್ಟ ಡಾಕ್ಟರ್ ನಿಂದ ಒಬ್ಬ ವ್ಯಕ್ತಿ ಸಾಯಬಹುದು ಆದರೆ ಒಬ್ಬ ಕೆಟ್ಟ ಶಿಕ್ಷಕನಿಂದ ಒಂದು ತಲೆಮಾರು ಅಥವ ಒಂದು ಸಮಾಜವೆ ಕೆಡುತ್ತದೆ ಅದಕ್ಕಾ ಉತ್ತಮ ಶಿಕ್ಷಕರು ಈ ಸಮಾಜಕ್ಕೆ ಬೇಕು ಎಂಬ ಪರಿಕಲ್ಪನೆ. ಅವರಿಗೆ ಗುಣಮಟ್ಟದ ಶಿಕ್ಷಣದಿಂದ ಈ ಸಮಾಜವನ್ನು ಸುಧಾರಿಸಬಹುದೆಂಬ ಬಲವಾದ ನಂಬಿಕೆ.
ನಾನು ಈ ಹೋರಾಟದಲ್ಲಿ ಕೆಲವು ಸಮಯವನ್ನು ಅವರೊಂದಿಗೆ ಕಳೆಯಲು ಸಿಕ್ಕಿದೆ. ಆಗೆಲ್ಲ ಅವರು ಮಂಡಲ್ ಪಂಚಾಯ್ತಿ ಅಧ್ಯಕ್ಷ ಗಾದಿಯಿಂದ ಸಚಿವ ಸ್ಥಾನದವರೆಗೆ ಬೆಳೆದುಬಂದ ದಾರಿ ಮತ್ತು ಅವರು ಮಾಡಿದ ಕೆಲಸಗಳ ಜೊತೆಗೆ ರಾಮಕೃಷ್ಣ ಹೆಗ್ಡೆಯವರೊಂದಿನ ಒಡನಾಟದ ಬಗ್ಗೆ ಕೆಲವು ವಿಷಯವನ್ನು ಹಂಚಿಕೊಂಡಿದ್ದಾರೆ. ಅವರು ಚುನಾವಣೆಯಲ್ಲಿ ಸೋತರು ಅವರ ಉತ್ಸಾಹ ಬತ್ತಿಲ್ಲ, ದಿನಕ್ಕೊಂದು ಅವರ ಕ್ಷೇತ್ರದಿಂದ ನೂರಾರು ಜನರು ಕರೆಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ ಮತ್ತದಕ್ಕೆ ಅಷ್ಟೇ ಪ್ರೀತಿಯಿಂದ ಇವರು ಸಹಾಯ ಮಾಡುತ್ತಾರೆ. ಸೋತ ಮೇಲೆ ಹೋರಾಡುವ ಮತ್ತು ಜನ ಸೇವೆ ಮಾಡುವ ಅವರ ಉತ್ಸಾಹ ಇನ್ನೂ ಹಚ್ಚಾಗಿದೆ ಹೊರತು ಕಡಿಮೆಯಾಗಿಲ್ಲ. ಪ್ರತಿ ವಾರ ಹಣ ಖರ್ಚು ಮಾಡಿಕೊಂಡು ಒಂದಲ್ಲ ಒಂದು, ಒಬ್ಬರದಲ್ಲ ಮತ್ತೊಬ್ಬರ ಸಮಸ್ಯೆಯನ್ನು ಹಿಡಿದುಕೊಂಡು ಬಂದು ವಿಧಾನ ಸೌದದಲ್ಲಿ ಅಧಿಕಾರಿಗಳನ್ನ, ಸಚಿವರನ್ನ ಬೇಟಿಯಾಗಿ ಸಮಸ್ಯೆಗೆ ಪರಿಹಾರ ಕೊಡಿಸುತ್ತಾರೆ. ಇಷ್ಟೆಲ್ಲ ಕ್ರೀಯಾಶೀಲರಾಗಿ ಜನಪರ ಕಾಳಜಿಹೊಂದಿರುವ ಇಂತಹ ಜನನಾಯಕನ ಕೈಯಲ್ಲಿ ಅಧಿಕಾರವಿದ್ದರೆ ಅವರ ಯೋಚನೆ ಮತ್ತು ಯೋಜನೆಗಳನ್ನ ಕಾರ್ಯರೂಪಕ್ಕೆ ತರಲು ಇನ್ನೂ ಸ್ಥೈರ್ಯ, ಧರ್ಯ ಮತ್ತು ಶಕ್ತಿ ತುಂಬುತ್ತದೆ ಎನ್ನುವುದು ನನ್ನ ಭಾವನೆ.
Comments