ಹೊಸದಿಲ್ಲಿ: ನಿಮ್ಮ ಪೋನ್ ಗೆ ತುರ್ತುಪರಿಸ್ಥಿತಿ ಎಚ್ಚರಿಗೆ ಸಂದೇಶ ಬಂದಿದೆಯೇ ಭಯ ಪಡುವ ಅಗತ್ಯವಿಲ್ಲ, ಏಕೆಂದರೆ ಭಾರತ ಇಂದು ತನ್ನ ಎಮೆರ್ಜನ್ಸಿ ಅಲರ್ಟ್ ಅನ್ನು ಪರೀಕ್ಷಿಸುವ ಸಲುವಾಗಿ, ಹಲವು ಸ್ಮಾರ್ಟ್‌ಫೋನ್‌ಗಳಿಗೆ ಪರೀಕ್ಷಾರ್ಥ ಫ್ಲ್ಯಾಶ್ ಸಂದೇಶ ಕಳುಹಿಸಿದೆ. ಪೋನ್ ಬಳಕೆದಾರರಿಗೆ ಜೋರಾದ ಬೀಪ್ ಸದ್ದಿನೊಂದಿಗೆ “ಎಮೆರ್ಜನ್ಸಿ ಅಲರ್ಟ್: ಸೀವಿಯರ್” ಫ್ಲ್ಯಾಶ್ ಸಂದೇಶ ಬಂದಿದೆ.
ಎಮೆರ್ಜನ್ಸಿ ಅಲರ್ಟ್ ನಲ್ಲಿದ್ದ ಸಂದೇಶ:
“ಭಾರತ ಸರ್ಕಾರದ ಟೆಲಿಕಮ್ಯುನಿಕೇಶನ್ ಇಲಾಖೆಯ ಮೂಲಕ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಂ ಕಳುಹಿಸಿದ ಸ್ಯಾಂಪಲ್ ಟೆಸ್ಟಿಂಗ್ ಸಂದೇಶ ಇದಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ, ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಇದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅನುಷ್ಠಾನಗೊಳಿಸುತ್ತಿರುವ ಭಾರತದಾದ್ಯಂತದ ತುರ್ತುಪರಿಸ್ಥಿತಿ ಎಚ್ಚರಿಕೆ ಸಿಸ್ಟಿಂನ ಪರೀಕ್ಷೆ, ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಿ ತುರ್ತು ಸನ್ನಿವೇಶಗಳನ್ನು ಸಮಯಕ್ಕೆ ಸರಿಯಾಗಿ ಎಚ್ಚರಿಕೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ,” ಎಂದು ಫ್ಲ್ಯಾಶ್ ಸಂದೇಶದಲ್ಲಿ ಇತ್ತು ಎಂಬುದು ತಿಳಿದು ಬಂದಿದೆ.
ಇಂದು ಮಧ್ಯಾಹ್ನ 1 ಗಂಟೆ ಸಮಾರಿಗೆ ಕೆಲವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಸಂದೇಶ ಬಂದಿದೆ. ಇಂತಹ ಪರೀಕ್ಷೆಗಳನ್ನು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಆಗಾಗ ಮಾಡಲಾಗುವುದು ಹಾಗೂ ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟಿಂ ಸಿಸ್ಟಂಗಳು ತುರ್ತು ಎಚ್ಚರಿಕೆ ಸಂದೇಶಗಳನ್ನು ಎಷ್ಟು ಪರಿಣಾಮಕಾರಿಯಾಗಿ ತಲುಪಿಸುತ್ತವೆ ಎಂದು ಕಂಡುಕೊಳ್ಳವ ಸಲುವಾಗಿ ಇದನ್ನು ಪರೀಕ್ಷಾರರ್ಥವಾಗಿ ಮಾಡಲಾಗಿದೆ.
ಸುನಾಮಿ, ಭೂಕಂಪ ಹಾಗೂ ದಿಢೀರ್ ಪ್ರವಾಹದಂತಹ ಸಂದರ್ಭಗಳಲ್ಲಿ ಇಂತಹ ಸಂದೇಶಗಳನ್ನು ಜನರಿಗೆ ತಲುಪಿಸಿ ಎಚ್ಚರಿಕೆ ನೀಡುವ ಉದ್ದೇಶಕ್ಕಾಗಿ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಶ್ರಮಿಸುತ್ತಿದೆ.
Comments