ಮಡಿಕೇರಿ: ನೀವು ಸಾಕಿದ ನಾಯಿಗಳು ಯಾವುದಾದರೂ ವ್ಯಕ್ತಿ ಮೇಲೆ ದಾಳಿ ಮಾಡಿದರೆ, Section: 289 IPC ಅಡಿಯಲ್ಲಿ ಸಾಕು ನಾಯಿಯ ಮಾಲೀಕರ ಕೇಸ್ ದಾಖಲಿಸಲಾಗುತ್ತದೆ. ಪ್ರಕರಣ ಸಾಭೀತಾದರೆ ಆ ನಾಯಿಯ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಹಾಗೂ ಆರು ತಿಂಗಳ ಜೈಲುವಾಸ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಕೊಡಗು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ. ಸಾಕುನಾಯಿ ದಾಳಿ ಮಾಡಿರುವ ಪ್ರಕರಣಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112ಗೆ ಕರೆ ಮಾಡುವಂತೆ ಹಾಗೂ ಕೆ.ಎಸ್.ಪಿ. ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನರ್ಸ್ ಮೇಲೆ ಸಾಕು ನಾಯಿ ದಾಳಿ: ಪಾರಾಣೆ-ಕೊಣಂಜಗೇರಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್ ಬೈಲೆಮನೆ ಭವ್ಯ ಎಂಬಾಕೆ ಗ್ರಾಮದಲ್ಲಿ ಇತ್ತೀಚೆಗೆ ಹೆರಿಗೆಯಾದ ತಾಯಿ ಮಗುವನ್ನು ವಿಚಾರಿಸಿ ಔಷಧಿಗಳನ್ನು ನೀಡಿ ಕರ್ತವ್ಯದಲ್ಲಿ ಹಿಂತಿರುಗುವ ಸಂದರ್ಭ ಹೆರಿಗೆಯಾದ ಮಹಿಳೆಯ ಸಾಕು ನಾಯಿ ದಾಳಿ ನಡೆಸಿದ್ದು ಆರೋಗ್ಯ ಅಧಿಕಾರಿ ಭವ್ಯ ಗಂಭೀರವಾಗಿ ಗಾಯಗೊಂಡಿದ್ದರು. ವಿಷಯ ತಿಳಿದ ಕೊಣಂಜಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಾಡೆಯಂಡ ಕಟ್ಟಿ ಗಾಯಗೊಂಡ ನರ್ಸ್ ಅವರನ್ನು ನಾಪೋಕ್ಲು ಪಟ್ಟಣಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣ ದಾಖಲು
ಕೊಣಂಜಗೇರಿ ಪಾರಾಣೆ ಗ್ರಾಮದ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಆರೋಗ್ಯ ಅಧಿಕಾರಿ ಕೆ.ಕೆ.ಭವ್ಯಾ ಎಂಬವರ ಮೇಲೆ ನಡೆದ ಸಾಕುನಾಯಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಕ ಬಿ.ಮಾಚಯ್ಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
Comments