ನಿಲುವು!
- vishwa patha
- Aug 26, 2023
- 1 min read

ನಿಂದನೆಗಳು
ನಿಲುವಾಗ ಬೇಕು!
ನಿಲುವುಗಳು
ಬಲವಾಗ ಬೇಕು!
ಬಲವು ಹೆಗಲೇರಿ
ಜಗವ ಬೆಳಗ ಬೇಕು!
ಸ್ಮಶಾನದೊಳಗೆ
ವೈರಾಗಿಯಾಗ ಬೇಕು!
ಸಂತೆಯೊಳಗೆ
ಸಂತನಾಗ ಬೇಕು!
ಕ್ರಾಂತಿಯಲಿ
ಕತ್ತಿ ಮೊಣಚಾಗ ಬೇಕು!
ಶಾಂತಿಯಲಿ
ಹಸಿರ ತೋಪಾಗ ಬೇಕು!
ಮಾತು
ಕೃತಿಯಾಗ ಬೇಕು!
ಕೃತಿಯು
ದ್ವಿತೀಯಾಗ ಬೇಕು!
ಒಳಗೊಬ್ಬ
ಬುದ್ದನನು ಕಾಣ ಬೇಕು!
ಒಳಗಣ್ಣು
ಬಸವನಾಗ ಬೇಕು!
ಬೇಕು ಬೇಕು ಬೇಕು
ನನ್ನೊಳಗೊಬ್ಬ ಮನುಜ ಬೇಕು!
ಲೇಖಕರು: ಮೋಹನ ಕೊಳವಳ್ಳಿ
Place: ಕೊಳವಳ್ಳಿ, ಶಿವಮೊಗ್ಗ Education: MA in English, B.Ed, PGDT & PGDKJ Profession: Lecturer Hobbies: Reading & writing poem & articles
ಜೀವಂತಿಸುವಂತಹ ಸಾಲುಗಳು
ನಮ್ಮೊಳಗೆ ಹುಡುಕ ಹೊರಟಿದೆ.....
Beautiful lines sir.
👌👍👍
👏👏👏👏