ನಾನೇ ಕೊಂದ ಬದುಕು
- vishwa patha
- Sep 14, 2023
- 1 min read

ಬಿಸಿ ಉಸಿರ ಕದನಕ್ಕೆ ಸದಾ ಸಿದ್ದವಾದ
ಜೀವನ
ಮಾಗಿದ ಮಾವಿನ ರಸ ಹೀರುವ ದುಂಬಿಗಳ ಕದನ
ರಾತ್ರಿ ಪಾಳಿಯ ಮೃದು ಮಲ್ಲಿಗೆಯ
ಸೌಂದರ್ಯ ಮದನ
ಸವಿದಷ್ಟೂ ರುಚಿಸಿ
ಮತ್ತೆ ಬೇಡಿ ಬರುವ ಸಾಲು ಮೃಗಗಳ ಚಾರಣ
ಅದರಲಿ ಸಾರಂಗದ ಹರಣ
ಮನದ ಭಯಕೆಗಳ ಅದುಮಿ
ಬರಿ ದೇಹ ಮಿಲನ
ಕಾಣದ ಕತ್ತಲೆಯೊಳು
ಕಣ್ಣೀರ ಮರಣ
ಆಸೆಯ ಬದುಕಲ್ಲ
ನಿರಾಸೆಯ ದಾರಿಯೊಳು
ಒಂದಿಷ್ಟು ಉಸಿರು ನೀಡಿದ
ಅಡ್ಡ ದಾರಿಯ ಪರಿಣಾಮದ ಬದುಕು
ದಣಿವಾರಿ ಮೈಕೊಡವಿ ಮೇಲೆರುವ
ಮೊದಲೆ ಉಸುಕಿನಲಿ
ಸಿಲುಕಿದ ಕಾಲು
ಬಿಡಿಸಲಾಗದೆ ಬರಿ ಪ್ರಯತ್ನಗಳ
ಸೋಲು
ಅಲ್ಲಿಂದೀಚೆಗೆ ಬರಿ
ಉಸಿರಿಡಿದ ಬದುಕು
ಬೆವರಿಳಿಸಿ ಬೇವರೊರಸಿ
ಕೊಂಚ ವಿರಾಮದ ಗೆಲುವು
ಎಂದೋ ಕೊಂದ ಸಾರಂಗದ
ಮಾಂಸದ ಮುದ್ದೆಯ ದಿನವು
ನೆಕ್ಕುವ ಸೀಳು ನಾಯಿಗಳ
ಸಾಲಿನಲಿ
ಮೂಟೆ ಕಟ್ಟಿದ ಕನಸುಗಳ
ಜೊತೆಗೆ ದೇಹ ಮಣ್ಣಾಗಿಸುವ
ದಿನ ಕಾಯುವ ಬದುಕು
ದಿನವು ಕಾಯುವ ಹಳೆತಾದ ಬದುಕು
ಅರುಣ್ ಕುಮಾರ್ ಯಾದವ್ ಜಿ. ಕೆ
ಸಾಫ್ಟ್ ವೇರ್ ಇಂಜಿನಿಯರ್, ಬೆಂಗಳೂರು.
Comments