top of page

ಮೆಕ್ಸಿಕೋ ಸಂಸತ್‌ನಲ್ಲಿ ಸಾವಿರ ವರ್ಷಗಳ ಹಳೆಯ'ಏಲಿಯನ್'ಗಳ ಶವ ಪ್ರದರ್ಶನ

  • Writer: vishwa patha
    vishwa patha
  • Sep 15, 2023
  • 1 min read

ಮೆಕ್ಸಿಕೋ: ಅನ್ಯಗ್ರಹ ಜೀವಿಗಳ ಅಸ್ತಿತ್ವದ ಅಂತೆ ಕಂತೆಗಳ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ, ಏಲಿಯನ್‌ಗಳ ಅಸ್ತಿತ್ವ ಪೊಳ್ಳು ಎಂಬ ವಾದಗಳ ಮಧ್ಯೆ, ಮೆಕ್ಸಿಕೋ ಸಂಸತ್‌ನಲ್ಲಿ ಒಂದು ಸಾವಿರ ವರ್ಷಕ್ಕೂ ಹಿಂದಿನ ಎರಡು ಏಲಿಯನ್‌ಗಳ ಕಳೇಬರಗಳನ್ನು ಪ್ರದರ್ಶಿಸಲಾಗಿದೆ, ಇದು ಜಗತ್ತಿನಾದ್ಯಂತ ಏಲಿಯನ್‌ಗಳ ಬಗ್ಗೆ ಇದ್ದ ಸಂಶಯವನ್ನು ಮತ್ತೆ ಹುಟ್ಟು ಹಾಕಿದೆ.

ಮೆಕ್ಸಿಕೋ ಕಾಂಗ್ರೆಸ್‌ನ ಸಾರ್ವಜನಿಕ ಅಹವಾಲು ಆಲಿಸುವ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ, 'ಯುಎಫ್‌ಒ ಮತ್ತು ಅಪರಿಚಿತ ಅಸಂಗತ ವಿದ್ಯಮಾನ'ಗಳನ್ನು ವಿವರಿಸುವ ವಿವಿಧ ವಿಡಿಯೋಗಳನ್ನು ಪ್ರದರ್ಶಿಸಿ, ಅದರ ಬಳಿಕ ಎರಡು 'ಏಲಿಯನ್ ಶವ'ಗಳನ್ನು ತೋರಿಸಲಾಗಿದೆ. ಗಾಜಿನ ಪೆಟ್ಟಿಗೆ ಒಳಗೆ ಇರಿಸಿದ ಎರಡು ಸಣ್ಣ ಗಾತ್ರದ ಏಲಿಯನ್‌ಗಳ ದೇಹಗಳನ್ನು ನೇರ ಪ್ರಸಾರದಲ್ಲಿ ಪ್ರದರ್ಶಿಸಲಾಗಿದೆ. ಇದನ್ನು ವೀಕ್ಷಿಸುತ್ತಿದ್ದ ಜನರು ಹಾಗೂ ಗಣ್ಯರು ಆಶ್ಚರ್ಯಚಕಿತರಾಗಿದ್ದಾರೆ.


ಯುಎಫ್‌ಒ ತಜ್ಞ ಜೈಮಿ ಮೌಸನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ವಿಜ್ಞಾನಿಗಳು ಮತ್ತು ಅಮೆರಿಕನ್ಸ್ ಫಾರ್ ಸೇಫ್ ಏರೋಸ್ಪೇಸ್ ಕಾರ್ಯಕಾರಿ ನಿರ್ದೇಶಕ ಹಾಗೂ ಅಮೆರಿಕ ಮಾಜಿ ನೌಕಾದಳದ ಪೈಲಟ್ ರಿಯಾನ್ ಗ್ರೇವ್ಸ್ ಅವರ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಒಂದು ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾದ ಈ ಶವಗಳನ್ನು ಪೆರುವಿನ ಕುಸ್ಕೋದಲ್ಲಿ ಪತ್ತೆ ಮಾಡಲಾಗಿತ್ತು. ಇವು ನಿಜಕ್ಕೂ ಏಲಿಯನ್‌ಗಳ ಶವ ಎಂದು ವಿಜ್ಞಾನಿಗಳು ಸಹ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ಮೆಕ್ಸಿಕೋದಲ್ಲಿ ಪ್ರದರ್ಶಿಸಲಾದ ಏಲಿಯನ್ ಮಾದರಿಗಳಲ್ಲಿನ ಡಿಎನ್‌ಎ ಪುರಾವೆಗಳು, ಭೂಮಿಯ ಜೀವ ವಿಕಸನದ ಯಾವ ಭಾಗಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ಇತರೆ ಡಿಎನ್‌ಎ ಮಾದರಿಗಳ ಜತೆ ಇವುಗಳನ್ನು ಹೋಲಿಕೆ ಮಾಡಿದಾಗ, ಶೇ 30ಕ್ಕಿಂತ ಅಧಿಕ ಡಿಎನ್ಎ 'ಅಪರಿಚಿತ'ವಾಗಿರುವುದು ಕಂಡುಬಂದಿದೆ ಎಂದು ಯುಎಫ್‌ಒ ತಜ್ಞ ಮೌಸನ್ ಹೇಳಿದ್ದಾರೆ. ಈ ಏಲಿಯನ್ ಗಳು ಯುಎಫ್‌ಒ ಒಂದರ ಅವಘಡದಿಂದಾಗಿ ನಮ್ಮ ಭೂಮಿಯನ್ನು ಸೇರಿರಬಹುದು ಎಂದು ನಂಬಲಾಗಿದೆ, ಆದರೆ ಇವು ಡಿಯೊಟಾಮ್ ಎಂಬ ಒಂದು ಬಗೆಯ ಪಾಚಿಗಳ ನಡುವೆ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲದೆ ಈ ಏಲಿಯನ್ ಗಳನ್ನು ಎಕ್ಸ್‌ರೇಗೆ ಒಳಪಡಿಸಿದಾಗ, ದೇಹದ ಒಳಗೆ 'ಮೊಟ್ಟೆಗಳು' ಇರುವುದು ಪತ್ತೆಯಾಗಿದೆ. ಎರಡರಲ್ಲಿಯೂ ಒಸ್ಮಿಯಮ್ ಸೇರಿದಂತೆ ಬಹಳ ಅಪರೂಪದ ಲೋಹಗಳಿಂದ ಮಾಡಿದ ಕಸಿ ಕಂಡುಬಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Comments


bottom of page