top of page
Writer's picturevishwa patha

ಜಾತಿಯನ್ನು ಮೀರಿ ಬದುಕ ಬಯಸುವ ಮನೆಯಲ್ಲಿ ಉರಳಿಸಲಾಗದ ಕೆಲವು ಗೋಡೆಗಳು!

ನಾವು ಕೆಲವೊಮ್ಮೆ ಜಾತಿಯನ್ನು ಮೀರಿ ಬೆಳೆಯ ಬೇಕೆಂದರು ಜಾತಿ ನಮ್ಮ ಪೋಷಕರ ರೂಪದಲ್ಲಿ ನಮ್ಮನ್ನು ಮೀರಿ ಬೆಳದು ಬಿಡುತ್ತದೆ. ಒಮ್ಮೊಮ್ಮೆ ನನ್ನ ಹಾಗೆ ಯೊಚನೆ ಮಾಡೊ ವ್ಯಕ್ತಿಗಳಿಗೆಲ್ಲ ಆಗುವ ಅನುಭವ ಇದೆ ಇರಬಹುದು.

ಸಸ್ಯಹಾರಿಯಾದ ನನಗೆ ಯಾವ ಮಾಂಸಹಾರಿಯ ಮನೆ/ಹೊಟೆಲ್ಗಳಲ್ಲಿ ಕುತ್ಕೊಂಡು ನನಗಿಷ್ಟವಾದ ಆಹಾರ ಸೇವನೆ ಮಾಡಲು ನನಗೇನು ಅಭ್ಯಂತರವಿಲ್ಲ. ಅದೆ ತರಹದಲ್ಲಿ ಮಾಂಸಹಾರಿಯೊಬ್ಬನನ್ನು ನಮ್ಮ ಮನೆಯ ಊಟದ ಹಾಲಲ್ಲಿ ಕೂರಿಸಿ ಊಟ ಬಡಿಸಲು ಯಾವ ಕಟ್ಟುಪಾಡುಗಳು ಬೇಕಿಲ್ಲ ಅನ್ನಿಸುತ್ತದೆ. ಅವನ ಆಹಾರ ಪದ್ಧತಿ ಅವನದು, ನನ್ನ ಆಹಾರ ಪದ್ಧತಿ ನನ್ನದು ಅಷ್ಟಕ್ಕೆ ಕಟ್ಟುಪಾಡುಗಳು ಅಡ್ಡಬರುವುದಿಲ್ಲ. ಹೀಗೆ ಮದುವೆ, ಹಬ್ಬಹರಿದಿನಗಳಿಗೆ ಕೂಡ, ಆದರೆ ಇಂತಹ ವರ್ತನೆಗಳು ನಮ್ಮನ್ನ ಹಡೆದು, ಪೋಷಿಸಿದ ಪೋಷಕರಿಗೆ ಕಿರಿಕಿರಿ ಮತ್ತು ಸಂಕಟವನ್ನು ಉಂಟು ಮಾಡುವುದರ ಜೊತೆಗೆ, ನಮ್ಮ ಮಗ/ಮಗಳು ಜಾತಿಯನ್ನು, ನಮ್ಮ ಜಾತಿ ಸಂಸ್ಕಾರವನ್ನ, ಕಟ್ಟುಪಾಡುಗಳನ್ನ ಹಾಳು ಮಾಡುತ್ತಿದ್ದಾನೆ/ಳೆ, ಮೈಲಿಗೆಯನ್ನು ಮಾಡುತ್ತಿದ್ದಾನೆ ಎಂಬೆಲ್ಲಾ ಗೋಳಾಟಗಳು ಆರಂಭವಾಗುತ್ತವೆ. ಇಲ್ಲಿ ಉಂಟಾಗುವ ಸಮಸ್ಯೆ ಎಂದರೆ ಜಾತಿಯನ್ನು ಮೀರ ಬೇಕಾದ ನಾವು ನಮ್ಮನ್ನ ಹೆತ್ತು ಹೊತ್ತು, ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ ಪೋಷಕರ ಭಾವನೆಗಳಿಗೆ, ನಂಬಿಕೆಗಳಿಗೆ ಕೊಡಲಿಯೇಟನ್ನು ಇಡ ಬೇಕಾಗುತ್ತದೆ. ಆದಗ್ಯು, ನಾವು ಅವರಿಗೆ ತಿಳಿ ಹೇಳುವ ಪ್ರಯತ್ನ ಮಾಡ ಬಹುದು ಆದರೆ ಅವರು ಮಡಿ ಇರಬೇಕಾದ್ದು ವ್ಯಕ್ತಿತ್ವದಲ್ಲಿ ಮನೆಯಲ್ಲ ಎಂಬುದನ್ನ ಅರ್ಥ ಮಾಡಿಕೊಳ್ಳುವ ಆಧುನಿಕತೆಗೆ ತೆರೆದು ಕೊಂಡಿರ ಬೇಕಲ್ಲ!?, ಅಲ್ಲದೆ ಜಾತಿಯ ಕಟ್ಟುಪಾಡುಗಳನ್ನೆ ನೇತು ಹಾಕಿಕೊಂಡಿರುವ ಸಮಾಜದ ಅಣುಕನ್ನು ಎದುರಿಸುವ ಬಂಡ ದೈರ್ಯವನ್ನ ನಾವೇನೊ ಇಟ್ಟುಕೊಂಡಿರ ಬಹುದು ಆದರೆ ಅವರಿಗೆ ಇರಬೇಕಲ್ಲ!?. ಇದರ ಹೊರತಾಗಿ ಪೋಷಕರನ್ನು ದಿಕ್ಕರಿಸಿ ಹೊರ ನಡದೆ ಬಿಟ್ಟೆವು ಎನ್ನಿ! ಆಗ ಇದೇ ಸಮಾಜದಿಂದ ಪೋಷಕರನ್ನು ದಿಕ್ಕರಿಸಿದ ಟೀಕೆಗೆ ಗುರಿಯಾಗುವುದರ ಜೊತೆಗೆ ಪೋಷಕರು ಇಟ್ಟ ನಂಬಿಕೆಗೆ ಕೊಡಲಿ ಇಟ್ಟ ಪಾಪ ಪ್ರಜ್ಞೆಯ ಭಾವ ಕೂಡ. ಪೋಷಕರ ಪ್ರೀತಿ ಮತ್ತು ನಂಬಿಕೆಯ ಮೌಲ್ಯಗಳನ್ನ ಕಳೆದುಕೊಳ್ಳಲಾಗದೆ ಸಿದ್ಧಾಂತ ಮತ್ತು ಮೌಲ್ಯಗಳ ಜಿಜ್ಞಾಸೆಗೆ ಬಿದ್ದವರು ನನ್ನಂತೆ ಇನ್ನೆಷ್ಟು ಜನವಿರಬುದು!


ಲೇಖಕರು: ಮೋಹನ ಕೊಳವಳ್ಳಿ


Place: ಕೊಳವಳ್ಳಿ, ಶಿವಮೊಗ್ಗ

Education: MA in English, B.Ed, PGDT & PGDKJ

Profession: Lecturer

Hobbies: Reading & writing poem & articles


Comments


bottom of page