top of page

ಇಸ್ರೋ:ಡ್ರೋಗ್‌ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

  • Writer: vishwa patha
    vishwa patha
  • Aug 13, 2023
  • 1 min read

ಚಂಡೀಗಢ: ಚಂದ್ರನಯಾನ-3 ಯಶಸ್ವಿ ಬೆನ್ನಲ್ಲೇ ಇಸ್ರೋ ಈಗ ಮಾನವಸಹಿತ ಗಗನಯಾನಕ್ಕೆ ಸಿದ್ಧವಾಗುತ್ತಿದೆ. ಚಂಡೀಗಢದಲ್ಲಿರುವ ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಆ.8ರಿಂದ 10ರವರೆಗೆ ನಡೆದ ಡ್ರೋಗ್‌ ಪ್ಯಾರಾಚೂಟ್‌ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ.



ಈ ಪರೀಕ್ಷೆಗಳಿಗೆ ಆಗ್ರಾದಲ್ಲಿರುವ ಏರಿಯಲ್‌ ಡೆಲಿವರಿ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ ಮತ್ತು ಡಿಆರ್‌ಡಿಒ ಪೂರ್ಣ ಸಹಕಾರ ನೀಡಿವೆ ಎಂದು ಇಸ್ರೋ ತಿಳಿಸಿದೆ. ಪ್ರಸ್ತುತ ನಡೆದ ಪರೀಕ್ಷೆಯೂ ಗಗನನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿ ಮರಳಿ ಕರೆಯಿಸಿಕೊಳ್ಳುವ ತಂತ್ರಜ್ಞಾನವನ್ನು ಕಂಡುಕೊಳ್ಳಲಾಗಿದೆ.


ಗಗನ ನೌಕೆ ಮರಳಿ ಭೂಮಿಗೆ ಇಳಿಯುವಾಗ, ರನ್‌-ವೇ ಯಲ್ಲಿ ಅದರ ವೇಗವನ್ನು ನಿಯಂತ್ರಿಸಲು ಡ್ರೋಗ್‌ ಪ್ಯಾರಾಚೂಟ್‌ ಸಹಾಯ ಮಾಡುತ್ತದೆ. ಇಲ್ಲಿ ಪ್ಯಾರಾಚೂಟ್‌ ನೌಕೆಯ ವೇಗವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಮೂಲಕ ನೌಕೆಯನ್ನು ನಿಲ್ಲಿಸುವ ಕೆಲಸ ಮಾಡುತ್ತದೆ. ಈ ಪ್ಯಾರಾಚೂಟನ್ನು ಮಾರ್ಟರ್‌ ಎಂಬ ಸಾಧನದಲ್ಲಿ ಇರಿಸಿ, ಪರಿಸ್ಥಿತಿಗನುಗುಣವಾಗಿ ತೆರೆದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ.

Comments


bottom of page