ವಾಷಿಂಗ್ಟನ್: ಜಾಗತಿಕ ಮಟ್ಟದ 2023– ಇಂಟರ್‌ನ್ಯಾಷನಲ್ ಯಂಗ್ ಇಕೊ– ಹಿರೋ ಪ್ರಶಸ್ತಿ ಘೋಷಿಸಲಾಗಿದೆ, 17 ಯುವ ಪರಿಸರ ಕಾರ್ಯಕರ್ತರಿಗೆ ಪ್ರಶಸ್ತಿಯನ್ನು ನೀಡಲಾಗಿದ್ದು, ಇದರಲ್ಲಿ ಬೆಂಗಳೂರು ಮೂಲದ ಯುವತಿಯು ಸಹ ಸೇರಿದ್ದಾರೆ. ಇವರ ಜೊತೆಗೆ ಇನ್ನೂ ನಾಲ್ಕು ಭಾರತದ ಯುವ ಪರಿಸರ ಕಾರ್ಯಕರ್ತರಿಗೆ ಈ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಮಾನ್ಯ ಹರೀಶ್, ದೆಹಲಿಯ ನಿರ್ವಾಣ್ ಸೊಮಾನಿ, ಮೀರಠ್‌ನ ಐಹಾ ದೀಕ್ಷಿತ್, ಮನ್ನತ್ ಕೌರ್ ಹಾಗೂ ಮುಂಬೈನ ಕರ್ಣವ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಜಾಗತಿಕವಾಗಿ ಪರಿಸರದ ಸವಾಲು ಹಾಗೂ ಅಸಮತೋಲನಘಳನ್ನು ಕುರಿತು ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಅಮೆರಿಕ ಮೂಲದ ಸರ್ಕಾರೇತರ ಸಂಸ್ಥೆ ‘ಆ್ಯಕ್ಷನ್ ಫಾರ್ ನೇಚರ್’ ಈ ಪ್ರಶಸ್ತಿ ನೀಡುತ್ತದೆ. ಇದಕ್ಕೆ 8 ರಿಂದ 16 ವರ್ಷ ವಯೋಮಾನದ ಪರಿಸರ ಕಾರ್ಯಕರ್ತರನ್ನು ಆಯ್ಕೆ ಮಾಡಿಕೊಂಡು ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ ವರ್ಷದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಐಹಾ ದೀಕ್ಷಿತ್ ಅವರು ಸ್ವಯಂಸೇವಕರ ಸಹಾಯದೊಂದಿಗೆ ತಮ್ಮ ‘ಗ್ರೀನ್ ಐಹಾ ಸ್ಮೈಲ್ ಫೌಂಡೇಷನ್’ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ 20,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ.
ಐಹಾ ದೀಕ್ಷೀತ್ ಅವರು ತಮ್ಮ 'ಗ್ರೀನ್ ಐಹಾ ಸ್ಮೈಲ್ ಫೌಂಡೇಷನ್' ಮೂಲಕ, ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು ನಾಲ್ಕು ಸಾವಿರ ಗಿಡಗಳನ್ನು ನೆಟ್ಟ ಕಾರಣ, ಅವರಿಗೆ ಈ ವರ್ಷದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ನೀಡಿ ಗೌರವಿಸಲಾಗಿದೆ. ಗ್ರೀನ್ ಐಹಾ ಸ್ಮೈಲ್ ಫೌಂಡೇಷನ್ ಮೂಲಕ ನೂರಾರು ಸ್ವಯಂ ಕಾರ್ಯಕರ್ತರ ಸಹಾಯದಿಂದ ನಾವು ಈ ಗುರುಯನ್ನು ಸಾಧಿಸಿದ್ದೇವೆ, ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರ ಫಲವಾಗಿ ನನಗೆ ಈ ಪ್ರಶಸ್ತಿ ಸಿಕ್ಕಿದೆ ಎಂದು ಐಹಾ ಹೇಳಿದರು.
ಬೆಂಗಳೂರಿನವರಾದ ಮಾನ್ಯ ಹರೀಶ್ ಅವರು 8 ರಿಂದ 12 ವರ್ಷ ವಯೋಮಾನದವರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಇವರು ಬ್ಲಾಗ್ ಹಾಗೂ ಯುಟ್ಯೂಬ್ ವಾಹಿನಿ ‘ದಿ ಲಿಟ್ಲ್ ಎನ್ವಿರಾನ್‌ಮೆಂಟಲಿಸ್ಟ್’ ಮೂಖಾಂತರ ಪರಿಸರಕ್ಕೆ ಸಂಬಂಧಿಸಿದ ಸವಾಲುಗಳು ಮತ್ತು ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದರು. ಇವರ ಜೊತೆಗೆ ನಿರ್ವಾಣ್ ಸೋಮಾನಿ ಅವರು 13ರಿಂದ 16 ವರ್ಷ ವಯೋಮಾನದವರ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದರೆ, ಮನ್ನತ್ ಕೌರ್ ಅದೇ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಕರ್ಣವ್ ರಸ್ತೋಗಿ ಅವರು ವಿಶೇಷ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
Commentaires