top of page

ಪ್ರಜಾಪ್ರಭುತ್ವದ ಭರವಸೆ ಮತ್ತು ಆಶ್ವಾಸನೆಗಳು

  • Writer: vishwa patha
    vishwa patha
  • Sep 27, 2023
  • 2 min read

'The voter' Chenua Achebe ಯ ಒಂದು ಅದ್ಬುತ ಸಣ್ಣ ಕಥೆ. ಇದು ಪ್ರಜಾಪ್ರಭುತ್ವದಲ್ಲಿನ ಚುನಾವಣೆ ಮತ್ತು ರಾಜಕೀಯದ ಬಗ್ಗೆ ಬದಲಾದ ಜನರ ಮನಸ್ಥಿತಿ ಮತ್ತು ಯುವ ಜನಾಂಗದ ರಾಜಕೀಯದಲ್ಲಿನ ದೃಷ್ಟಿಕೋನವನ್ನ ಸಂಪೂರ್ಣವಾಗಿ ಬಿಚ್ಚಿಡುತ್ತದೆ. ಖಾಸಗಿ ಪಿ ಯು ಕಾಲೇಜೊಂದರಲ್ಲಿ ಆಂಗ್ಲ ಉಪನ್ಯಾಸಕನಾಗಿ ಕಾರ್ಯ ನಿರ್ವೈಹಿಸುತ್ತಿರುವ ದ್ವಿತಿಯ ಪಿಯುಸಿ ಪಠ್ಯದಲ್ಲಿರುವ Chenua Achebe ರ 'The voter' ಕಥೆಯನ್ನು ಕುರಿತು ಉಪನ್ಯಾಸನ ನೀಡುವ ಪ್ರತಿ ಬಾರಿ ನನ್ನಲ್ಲೆ ಏನೊ ಒಂದು ರೀತಿ ಅಸಾಹಯಕತೆ ಮತ್ತು ಅಸಮಧಾನ ಮೂಡಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಬದಲಾದ ಯುವಜನಾಂಗ ಮತ್ತು ಮತದಾರನ ದೃಷ್ಟಿಕೋನಗಳು. ಜಾತಿ ಮತ್ತು ಹಣದ ಬಲದ ಮೇಲೆ ನಡೆಯುವ ಚುನಾವಣ ರಾಜಕೀಯದ ಬಗ್ಗೆ ಬೇಸರ ಮೂಡಿಸುತ್ತದೆ. ಈ ಕಥೆಯಲ್ಲಿ ಬರುವ ಪ್ರತಿ ಸಂಭಾಷಣೆಯು ಚುನಾವಣ ರಾಜಕೀಯದ ಮೇಲಿನ ವ್ಯಂಗ್ಯವೆ ಆಗಿದೆ. ಇದಕ್ಕೆ ಸಂಭಂಸಿದಂತೆ ಕಥೆಯ ಪ್ರಮುಖ ಪಾತ್ರವೊಂದರ ಸಂಭಾಷಣೆ ಈ ಕೆಳಗಿನಂತಿದೆ.


Roof ಎಂಬ ಯುವ ಪುಡಿ ರಾಜಕಾರಣಿಯೊಬ್ಬ Marcus ಎಂಬ ಮಂತ್ರಿಯೊರ್ವನ ನಂಬಿಕಸ್ಥ ಚುನಾವಣ ಪ್ರಚಾರಕ ಅವನು ಗುಪ್ತವಾಗಿ ಮತದಾರರಿಗೆ ಹಣ ಹಂಚಲು ಹೋದಾಗ ಮತದಾರರು ಅವನು ಕೊಟ್ಟ ಕಡಿಮೆ ಹಣವನ್ನು ನಿರಾಕರಿಸುತ್ತಾರೆ ಮತ್ತು ಹೆಚ್ಚಿಗೆ ಹಣಕ್ಕಾಗಿ ಬೇಡಿಕೆಯನ್ನಿಡುತ್ತಾರೆ ಆಗ ಅವನು ಮತದಾರರಿಗೆ ಹೇಳುವುದು ಹೀಗೆ.


whether or not we cast our papers for Marcus, PAP will continue to rule. Think of the pipe-borne water they promised for us.


ಇದನ್ನ ಹೇಳಿ ಮಕ್ಕಳಿಗೆ ನಾನು ಪಿಯುಸಿ ಓದುತ್ತಿದ್ದಾಗ ನನ್ನ ಉಪನ್ಯಾಸಕರು ಹೇಳಿದ ಜೋಕ್ ಒಂದನ್ನು ಹೇಳಿದೆ. ಅದೇನೆಂದರೆ.


ಭಾರತದ ಮಂತ್ರಿಯೊಬ್ಬ ರಷ್ಯಾಕ್ಕೆ ಬೇಟಿ ನೀಡಿದಾಗ, ಅಲ್ಲಿನ ಮಂತ್ರಿಯೊರ್ವರ ಮನೆಯ ಪಾರ್ಟಿಯಲ್ಲಿ ಭಾಗವೈಹಿಸುತ್ತಾನೆ. ಆ ಮಂತ್ರಿಯ ವಿಜೃಂಭಣೆಯ ಬಂಗಲೆ ನೋಡಿ ಮನಸೋತ ಭಾರತದ ಮಂತ್ರಿ ಆತನನ್ನ ಕೇಳುತ್ತಾನೆ ಈ ಬಂಗಲೆಯನ್ನು ಕಟ್ಟಿಸಲು ಹೇಗೆ ಸಾಧ್ಯವಾಯಿತು ಎಂದು ಅದಕ್ಕೆ ಆ ಮಂತ್ರಿ ಕಿಡಕಿ ಹೊರಗೆ ಕೈ ತೋರಿಸಿ ನೋಡಿ ಅಲ್ಲಿ ನದಿಗೆ ಅಡ್ಡಲಾಗಿ ಕಾಣುತ್ತಿದೆಯಲ್ಲ ಆ ಸೇತುವೆ ಕಟ್ಟಿಸಿದವನು ನಾನೆ ಆದರ ಹತ್ತು ಶೇಖಡಾ ಹಣದಿಂದ ಈ ಬಂಗಲೆಯನ್ನ ಕಟ್ಟಿಸಿದ್ದೇನೆ ಎಂದು. ಭಾರತದ ಮಂತ್ರಿ ಆಸೆಯೊಂದನ್ನ ಹೊತ್ತು ಭಾರತಕ್ಕೆ ಹಿಂತಿರುಗುತ್ತಾನೆ. ಎರಡು ಮೂರು ವರುಷಗಳ ನಂತರ ತನಗೆ ಅಥಿತ್ಯ ನೀಡಿದ್ದ ರಷ್ಯಾದ ಮಂತ್ರಿಯನ್ನ ತನ್ನ ಮನೆಗೆ ಆಹ್ವಾನಿಸುತ್ತಾನೆ. ಭಾರತದ ಮಂತ್ರಿ ಮನೆಗೆ ಬಂದ ರಷ್ಯಾದ ಮಂತ್ರಿಗೆ ಆಶ್ಚರ್ಯಯೊ ಆಶ್ಚರ್ಯ. ಕೇವಲ ಎರಡು ಮೂರು ವರುಷದ ಹಿಂದೆ ತನ್ನ ಮನೆಯನ್ನು ನೋಡಿ ಹೊಗಳಿ ಹೋದ ಭಾರತದ ಮಂತ್ರಿಯ ಬಂಗಲೆ ಮುಂದೆ ಅವನ ಬಂಗಲೆ ಎಳ್ಳಷ್ಟು ಬೆಲೆ ಬಾಳದಂತ ಬಂಗಲೆಯಾಗಿ ಕಾಣಿಸುತ್ತದೆ. ಆತ ಕುತೂಹಲದಿಂದ ಭಾರತದ ಮಂತ್ರಿಯನ್ನು ಕೇಳುತ್ತಾನೆ ಕೇವಲ ಎರಡು ಮೂರು ವರುಷದಲ್ಲಿ ಇಷ್ಟು ದೊಡ್ಡ ಬಂಗಲೆ ಕಟ್ಟಿಸಲು ಆತನಿಗೆ ಹೇಗೆ ಸಾದ್ಯವಾಯಿತೆಂದು, ಅದಕ್ಕೆ ಭಾರತದ ಮಂತ್ರಿ ಕಿಟಕಿಯ ಹೊರಗೆ ತೋರುತ್ತಾ ನೋಡಿ ರಷ್ಯದಿಂದ ಭಾರತಕ್ಕೆ ಹಿಂತುರುಗಿದವನೆ, ಅಲ್ಲಿ ಕಾಣುತ್ತಿದೆಯಲ್ಲ ಆ ನದಿಗೆ ಸೇತುವೆ ನಿರ್ಮಾಣಕ್ಕೆಂದು ಶಂಕುಸ್ಥಾಪನೆ ಮಾಡಿದೆ. ಅದರಿಂದಲೆ‌‌ ನನಗೆ ಈ ಬಂಗಲೆ ಕಟ್ಟಲು ಸಾಧ್ಯವಾಗಿದ್ದು ಎಂದು. ರಷ್ಯಾದ ಮಂತ್ರಿ ಪೆಚ್ಚನಾಗಿ ಬಿಡುತ್ತಾನೆ.!


ಇದು ಜೋಕ್ ಎಂದುಕೊಂಡರೆ ಜೋಕ್, ಸತ್ಯ ಎಂದುಕೊಂಡರೆ ಸತ್ಯ ನಿಮಗೆ ಬಿಟ್ಟದ್ದು. ಬಹುತೇಕಗಳು ಆಶ್ವಾಸನೆಗಳಷ್ಟೆ ಮತ್ಯಾವ ವಾಸನೆಯು ಸರ್ಕಾರದ ಯೋಜನೆ ಮತ್ತು ರಾಜಕಾರಣಿಗಳ ಆಶ್ವಾಸನೆಗಳಿಂದ ಪಡೆಯಲು ಅಸಾಧ್ಯ. ಇದಕ್ಕೆ ಪುರಾವೆಗಳು ನಿಮ್ಮ ಊರು ಕೇರಿಗಳಲ್ಲೆ ಬೇಕಷ್ಟಿವೆ ಎಂದು ತರಗತಿ ಮುಗಿಸಿದೆ. ನಿಮಗೂ ಸಹ ಬಹುಶಃ ನಿಮ್ಮ ಊರುಗಳಲ್ಲೆ ಈ ಮೇಲಿ ಸಂಬಂಧ ಹಲವು ಪುರಾವೆಗಳು ಸಿಕ್ಕಿರುತ್ತವೆ ಎಂದುಕೊಳ್ಳುತ್ತೇನೆ


-Mohan Kolavalli



Comments


bottom of page