ಹಸಿವು
- vishwa patha
- Aug 13, 2023
- 1 min read

ಅವನ ಕಾತುರತೆಯಲ್ಲಿದ್ದ ಅವಳ ಕಣ್ಣಂಚಲ್ಲಿ
ಮಡಿಲ ದಾಯ ಬತ್ತಿ
ಒಡಲ ದಾಯ ಗಹಗಹಿಸಿ ನಗುತಲಿತ್ತು.
ಬಿಸಿ ಸ್ಪರ್ಶ ಕಾಮದ ಅವನ ಸುಪ್ಪತ್ತಿಗೆಯಲ್ಲಿ
ಸುಡು ಬಾಣಲೆಗೆ ಬಿದ್ದು ಬಾಣಸಿಗಗೆ ಸಿಕ್ಕ
ಜೀವಂತ ಮತ್ಸ್ಯೆ ಇವಳು.
ಅವನ ಕಾಮದ ಹಸಿವನ್ನು
ಅವಳ ದೇಹದ ಬೇನೆಯನ್ನು
ಮೆಟ್ಟಿ ನಿಂತಿತ್ತು ಅನ್ನದ ದಾಹ.
ಅದ ತೀರಿಸುವ ಗರ್ವದಲಿ
ಅವ ರಮಿಸಲಿಲ್ಲ, ನಮಿಸಲಿಲ್ಲ
ಅವಳದ ಬಯಸಲೂ ಇಲ್ಲ.
ಅವನ ಕಾಮ ತೃಷೆಯಲ್ಲಿ ಸಿಕ್ಕು
ನಜ್ಜುಗುಜ್ಜಾದ ದೇಹಕೆ ಮೇಲೆದ್ದು ಕಟ್ಟುವ
ಬೆಲೆ ಏನೆಂಬ ನೀರಿಕ್ಷೆ ಅವಳದು.
ಚಲ್ಲಣವ ಬಿಗಿ ಮಾಡಿ
ಕಿಸೆಯಲ್ಲಿ ತಡಕಾಡಿ
ಅಸಹ್ಯದಿ ಒಂದಿಷ್ಟು ಪುಡಿಗಾಸನ್ನೆಸದು
ವೆಶ್ಯಾಗೃಹವೆಂಬ ಜ್ಞಾನೋದಯದಲ್ಲಿ
ಅತ್ತಿತ್ತ ನೋಡಿ ಕದ್ದೊಡುವ
ಅವನ ಕಾಮದ ಪ್ರೇಮ
ಕಾಮ ಸ್ವ-ನಿಗ್ರಹಿಕೆಯಷ್ಟೆ ಮೊಟಕು.
ಸೆರಗನ್ನ ಸರಿಮಾಡಿ
ಮತ್ತೊರ್ವ ಕಾಮ ಪಶುವಿನ
ಮಗ್ಗಲಲ್ಲಿ ಮುಪ್ಪಾಗಿ ಬೀಳಲು ಸಿದ್ದಳಾಗಿ
ಮಂಚದ ಮೇಲೆ ಕುಳಿತ ನಿಷ್ಠೆ
ಅವಳ ಜೀವನ ಪರ್ಯಂತದ್ದು.
ಅಕೆಯ ಒಡಲನ್ನು ತಣಿಸುವಷ್ಟು ವಿಸ್ತಾರದ್ದು.
ಲೇಖಕರು: ಮೋಹನ ಕೊಳವಳ್ಳಿ
Place: ಕೊಳವಳ್ಳಿ, ಶಿವಮೊಗ್ಗ
Education: MA in English,B.Ed, PGDT & PGDKJ
Profession: Lecturer
Hobbies: Reading & writing poem & articles
Nice lines
ಹೃದಯಸ್ಪರ್ಶಿ ಕವಿತೆ...
Heart touching poem this is not just a life of her own hunger someone else life aslo there.Means their family .