ಹಣದ ಸನ್ನಿ
- vishwa patha
- Sep 27, 2023
- 1 min read

ಮನುಷ್ಯನನ್ನು ಹಿಂಡಿ
ಹಿಪ್ಪೆಮಾಡುತ್ತಿರುವುದು
ಮನುಷ್ಯತ್ವವನ್ನ ಹತ್ಯೆ ಮಾಡುತ್ತಿರುವುದು
ಸಂಭಂದಗಳಲ್ಲಿ ಸಂಧಿ ಸೃಷ್ಠಿಸುತ್ತಿರುವುದು
ಹಣದ ಸನ್ನಿ.
ಹಣ, ಕಾಸು,
ಪಗಾರ, ಮನಿ
ದುಡ್ಡು, ದುಡಿಮೆ, ಉಳಿತಾಯ
ಬೆಲೆ, ಮೌಲ್ಯ ಎಲ್ಲದರ ಸಂಕುಚಿತ ಮುಖವಿದು
ಹಣದ ಸನ್ನಿ.
ಜಗವ ನೋಡುತ್ತೇನೆಂದಾಗ
ತಾಯ ಗರ್ಭದಿಂದ
ಕರೆತರುವ ಅಯಾ, ವೈದ್ಯನಿಗಿದೆ
ಹಣದ ಸನ್ನಿ.
ದೇವಾಲಯದ ಅಂಗಳದಲ್ಲಿ
ಚಪ್ಪಲಿ ಕಾಯುವವನಿಗೆ,
ಗರ್ಭಗುಡಿಯಲ್ಲಿ ಕುಳಿತ ದೇವನಿಗೆ,
ದೇವನ ಮುಂದಿದ್ದ ಪುಜಾರಿಗಿದೆ
ಹಣದ ಸನ್ನಿ.
ಸ್ಮಶಾನದಲ್ಲಿ
ಆರಡಿ ಮೂರಡಿಯ
ಜಾಗ ತೋರಿಸುವವನಿಗೆ,
ಚಟ್ಟ ಕಟ್ಟುವವನಿಗಿದೆ
ಹಣದ ಸನ್ನಿ.
ಅಷ್ಟೇ ಏಕೆ,
ಚಟ್ಟದ ಮೇಲೆ ಪಟ್ಟವಾದವನಿಗೂ
ಬಿಟ್ಟಿರಲಿಲ್ಲ
ಹಣದ ಸನ್ನಿ.
-ಮೋಹನ ಕೊಳವಳ್ಳಿ
Comments