top of page

ಗಾಂಧಿಯನ್ನು ಪಾಲಿಸ ಬೇಕಿದೆ, ಪೂಜಿಸುವ ಬದಲು!

  • Writer: vishwa patha
    vishwa patha
  • Oct 2, 2023
  • 1 min read

ಸತ್ತವರನ್ನೊ

ದೇವರಾದವರನ್ನೊ

ಪೂಜಿಸಿದಂತೆ

ಗಾಂಧಿಯನ್ನು

ಪೂಜಿಸದೆ ಪಾಲಿಸಬೇಕಿದೆ.


ಏಕೆಂದರೆ,

ಗಾಂಧಿ ದೇವರಲ್ಲ

ಸತ್ತು ಸಮಾಧಿಯನ್ನ ಸೇರಿದವನು ಅಲ್ಲ

ಆತನೊಬ್ಬ ಸಂತ.


154 ರ ಇಳಿ ವಯಸ್ಸಲ್ಲು

ಚಂದದ‌ ಬದುಕ ಬದುಕುತ್ತ

ಹೋರಾಟದ ಉಕ್ತಿಯಲ್ಲಿ

ಇಡಿ ಸಮಾಜವನ್ನೆ

ಮುನ್ನಡಸುವ ಶಕ್ತಿಯುಳ್ಳ ಹಿರಿಯಜ್ಜನಾಥ.


ನಮ್ಮೊಳಗೆ

ನಮ್ಮ ಚಿಂತನೆಯೊಳಗೆ

ಅಭಿರುಚಿಯೊಳಗೆ

ಗಾಂಧಿಯನ್ನು ಸ್ವಾತಂತ್ರ್ಯವಾಗಿ

ನಡೆಯಲು ಬಿಟ್ಟು,

ಪಾಲಿಸ ಬೇಕಿದೆ

ಪೂಜಿಸುವ ಬದಲು.

Comments


bottom of page