
ನನ್ನೊಳಗೊಬ್ಬ
ಅಭಿಮಾನದ ಸ್ವಾತಂತ್ರ್ಯನಿದ್ದ,
ಈಗವನು,
ಆಡಂಬರನಾಗಿದ್ದಾನೆ.
ಅನುಕರಣೆಯೂ ಮಾಡುತ್ತಿದ್ದಾನೆ.
ಹೋರಾಟಗಳ
ರಕ್ತವನು ಭಸಿದು,
ರಾಜಕೀಯದ ಪಾಕಶಾಲೆಯಲಿ
ಮಳೆಗಾಲದ ಕಾಫಿನ್ನಾಗಿಸಿಕೊಂಡಿದ್ದಾನೆ!
ಧರ್ಮದ ಸಿಗಾರನ್ನ ಸೇದು, ಎಲ್ಲರನ್ನು ಸುಡುತ್ತಲೆ
ಅಹಿಂಸೆಯ
ಕುಹಕವನ್ನಾಡುತ್ತಿದ್ದಾನೆ!
ಜಾತಿಯ ಬಾಂದ್
ತಿಂದು ತೂರಾಡುತ್ತ
ಬಾದ್ಯತೆಗಳ ಮರೆತು
ಅಮಲೇರಿ ಮಲಗಿದ್ದಾನೆ.
ಸರ್ಕಾರಿ ಕಛೇರಿಗಳ
ಶಾಲಾ ಕಾಲೇಜುಗಳ
ದೊಡ್ಡ ಗೋಡೆಗಳಿಗೆ
ಬುದ್ದ, ಬಸವಣ್ಣ ,
ಗಾಂಧಿ, ಅಂಬೆಡ್ಕರ್
ಭಗತ್, ಬೋಸ್ ರನ್ನ
ನೇತಾಕಿಕೊಂಡಿದ್ದಾನೆ.
ಈಗವನು!
ಸ್ವಾತಂತ್ರ್ಯನಾಗಿಲ್ಲ
ಆಡಂಭರನಾಗಿದ್ದಾನೆ
ವ್ಯಭಿಚಾರಿಯಾಗಿದ್ದಾನೆ
ಭ್ರಷ್ಟನಾಗಿದ್ದಾನೆ
ಆದರೂ
ತಾನೊಬ್ಬ ಸ್ವಾತಂತ್ರಿ ಯೆಂದು
ತಿರಂಗದ ಮುಂದೆ
ಸೆಲ್ಯೂಟ್ ಹೊಡೆದು
ಎದೆಯುಬ್ಬಿಸಿ ನಿಂತಿದ್ದಾನೆ.
ಲೇಖಕರು: ಮೋಹನ ಕೊಳವಳ್ಳಿ
Place: ಕೊಳವಳ್ಳಿ, ಶಿವಮೊಗ್ಗ
Education: MA in English, B.Ed, PGDT & PGDKJ
Profession: Lecturer
Hobbies: Reading & writing poem & articles
ಸ್ವಾತಂತ್ರ ಎನ್ನುವ ಪದಕ್ಕೆ ವಿರೋಧ
ನಿಮ್ಮ ಕವಿತೆಯ ನಾಯಕನ ಗುಣ
ಆತನ ಸ್ವಾತಂತ್ರ ಬೇರೆ ಇದೆ
ಹಸಿವಿನ ವೇದನೆಯಿಲ್ಲ,
ನೋವಿನ ಪರಿವೇ ಇಲ್ಲ
ಹೊಟ್ಟೆ ತುಂಬಿದ ಸ್ವಾತಂತ್ರ
ಧನ್ಯವಾದಗಳು
ಹೆಸರಿಗೆ ಸ್ವಾತಂತ್ರ್ಯ , ಬದಲಿಗೆ ಬದುಕಿನ ಹೊಸ ಕನಸುಗಳಿಗೆ ವಿಳಂಬವೆಂಬ ಭರವಸೆಗಳ ಒಣ ಹಾರ.....ನಿಮ್ಮ ಕವನಗಳು ಬಂಡಾಯ ಸಾರುತ್ತಿವೆ...ಪ್ರತಿ ಒಬ್ಬ ದೀನನ ಜೀವನ ಅದೆ ಅಲ್ಲವೇ...ನಮ್ಮ ನಿಮ್ಮ ಹಾಗೆ.... ಬದಲಾವಣೆ ಬಯಸುವುದು.🙏😌😌 ..