top of page
Writer's picturevishwa patha

ಸಮತಾ ಸಮಾಜಕ್ಕೆ ನಾಂದಿ ಹಾಡಿದ ಅಂಬೇಡ್ಕರ್: ಪ್ರೊ. ಜಗನ್ನಾಥ ಕೆ. ಡಾಂಗೆ



ಡಾ. ಬಿ ಆರ್ ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ಸೃಷ್ಟಿಸಿದ ಮಹಾನ್ ನಾಯಕ. ದೇಶದ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಎನ್ನದೆ ಶ್ರಮಿಸಿದವರು ಇಂತಹ ನಾಯಕರು ಅವರ ಚಿಂಥನೆಗಳ ಮೂಲಕ ಎಂದಿಗೂ ನಮ್ಮೊಂದಿಗೆ ಇರುತ್ತಾರೆ. ವಿದ್ಯಾರ್ಥಿಗಳು ಅವರ ಚಿಂತನೆಗಳನ್ನು ಹಾಗೂ ಅವರ ಬದುಕಿನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರೊ. ಜಗನ್ನಾಥ ಕೆ. ಡಾಂಗೆ ಹೇಳಿದರು.


ಶುಕ್ರವಾರ ಶಂಕರಘಟ್ಟದಲ್ಲಿ ದೇವರಾಜ ಅರಸು ಇಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ನಾತಕೋತ್ತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಡಾ. ಬಿ ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಹಣ ದಿನದ ಆಚರಣೆಯಲ್ಲಿ ಅವರು ಮಾತನಾಡಿದರು.


ಮೊಂಬತ್ತಿ ಹಚ್ಚಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರು ದಲಿತ ಸಮುದಾಯದಿಂದ ಬಂದವರು ಸಮಾಜದಲ್ಲಿನ ದಲಿತರ ಬಗ್ಗೆ ಇರುವ ತಾರತಮ್ಯ ಹಾಗೂ ಶೋಷಣೆಗಳನ್ನು ನಿರ್ಮೂಲನೆ ಮಾಡಲು ಹೋರಾಡಿದವರು. ಎಲ್ಲಾ ಸಮೂದಾಯದ ಜನರಿಗೂ ಮೀಸಲಾತಿ ನೀಡಿ ಸಮತಾ ಸಮಾಜಕ್ಕೆ ನಾಂದಿಹಾಡಿದವರು.

ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಶ್ರೀಮತಿ ಶೈಲ ಕೆ ಎಸ್ ಅವರು ಮಾತನಾಡಿ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಹಾಗೂ ಮಹಾಜ್ಞಾನಿ. ಅವರ ಚಿಂತನೆಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾನು ಕೂಡ ಅವರ ಚಿಂತನೆಗಳನ್ನು ಬದುಕಿನಲ್ಲಿ ರೂಪಿಸಿಕೊಂಡು ಸಾಗುತ್ತಿದ್ದೇನೆ ಎಂದು ಹೇಳಿದರು.


ಈ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ವಕೀಲರಾದ ಶಿವಕುಮಾರ ಎಂ., ಕನ್ನಡ ಭಾರತಿ ಅಧ್ಯಯನ ವಿಭಾಗದ ಪ್ರಧ್ಯಾಪಕರಾ ಡಾ. ನೆಲ್ಲಿಕಟ್ಟೆ ಎಸ್ ಸಿದ್ದೇಶ, ವಿದ್ಯಾರ್ಥಿ ನಿಲಯ ಪಾಲಕರಾದ ಶ್ರೀ ಆರ್ ಅಶೋಕ್ ರಾವ್, ಸುಧಾಕರ್, ಚಂದ್ರನಾಯ್ಕ್ ಹಾಗೂ ಸಿಬ್ಬಂದಿಗಳು, ನೌಕರರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Comments


bottom of page