
ಎದೆಗೆ ಬಿದ್ದ ಅಕ್ಷರ
ಇಳಿಯ ಬೇಕಿದೆ ಆಳಕೆ
ಮೊಳಕೆಯೊಡೆದು ಚಿಗುರಿ
ಪೈರಾಗ ಬೇಕಿದೆ ಬದುಕಿಗೆ.
ಸೆಟದು ನಿಲ್ಲುವ ಪಂಜಿಗೆ
ಉರಿವ ಬಗೆಯ ತೋರಿ
ದೀಪದ ಅರಿವ ಬೆಳಕಿನಲ್ಲಿ
ಎದೆಗೆ ಬಿದ್ದ ಅಕ್ಷರ
ಇಳಿಯ ಬೇಕಿದೆ ಬದುಕಿಗೆ.
ಬ್ರಾಹ್ಮಣ್ಯದ ಕವಚ ಬಿಚ್ಚಿ
ಶೂದ್ರತೆಯ ಮೌಢ್ಯ ತೊಳೆದು
ತುಳಿದವನ ಹಳಿದು ನಿಲ್ಲಲು
ಎದೆಗೆ ಬಿದ್ದ ಅಕ್ಷರ
ಇಳಿಯ ಬೇಕಿದೆ ಬದುಕಿಗೆ.
ಕಾವಿಯೊಳಗಿನ ಕಾಮದಸಿವ
ಖಾದಿಯಲ್ಲಿನ ಕರಾಮತ್ತ
ಹಿಡಿದು ಜಗ್ಗಿ, ಬೆತ್ತಲಾಗಿಸಲು
ಎದೆಗೆ ಬಿದ್ದ ಅಕ್ಷರ
ಇಳಿಯ ಬೇಕಿದೆ ಬದುಕಿಗೆ.
ಗಾಂಧಿ ಗಮ್ಯವಾಗಿ
ಬದುಕಿನೊಳಗಣ ಗರಿಕೆ ಕಿತ್ತು
ಬಸವಣ್ಣನ ಚಾತಿ ಹಿಡಿದು
ಬುದ್ಧನ ಬದುಕಿಗೆ ಇಳಿಸೊ
ಎದೆಗೆ ಬಿದ್ದ ಅಕ್ಷರ
ಇಳಿಯ ಬೇಕಿದೆ ಇನ್ನೂ ಆಳಕೆ.
ಲೇಖಕರು: ಮೋಹನ ಕೊಳವಳ್ಳಿ
Place: ಕೊಳವಳ್ಳಿ, ಶಿವಮೊಗ್ಗ Education: MA in English, B.Ed, PGDT & PGDKJ Profession: Lecturer Hobbies: Reading & writing poem & articles
Great words 👏
Very meaningful.🙏