top of page

ಧರಣಿಯೊಳಗೆ ನೆಲದ ಬೇರು

  • Writer: vishwa patha
    vishwa patha
  • Aug 13, 2023
  • 1 min read


ಬುದ್ದರಾಗಲು ಹೊರಡಿ,

ಸಮೃದ್ದಿ ಸಮಾಜ ಕಟ್ಟಲು ಹೊರಡಿ,

ಬುದ್ದಿ ಮಾಂಧ್ಯರಾಗಿ, ಬೂದಿಯಾಗಲು

ಬಯಕೆ ಯಾಕೆ ?, ಜ್ಞಾನ ಭಂಡಾರಕೆ

ಶೂದ್ರ ಉಸಿರು ಶಾಪವಾಗಲಾರದು

ನಿನ್ನ ಮೌಢ್ಯವೇ ಆಪತ್ತು, ನಿನ್ನೊಳಗಿನ

ಕೀಳುತನವೇ ಶಾಪ, ಸಂವಿಧಾನದ

ಶಕ್ತಿ ಅರಿತು ನಡೆದರೆ ನೀನೇ ಶಕ್ತಿಧಾಮ.


ಕೂಲಿ ಅವಮಾನವಲ್ಲ, ಕುಡಿತ ಅವಮಾನ,

ಚಿಲ್ಲರೆ ಕಾಸು ನಿನ್ನ ದುಡಿಮೆ, ಒಪ್ಪುತ್ತೆನೆ.

ಚಿಲ್ಲರೆ ಮನಸ್ಥಿತಿ ಸಂಪಾದಿಸದಿರು

ಭೀಮನ ತ್ಯಾಗ – ಬಲಿದಾನ ಅರ್ಥೈಸಿರಿ,

ಕೊಳ್ಳಿ ಇಡದಿರಿ ಅಖಂಡ ದ್ರಾವಿಡ ಕುಲಕ್ಕೆ.

ಜನಿವಾರವಾಗಲು ಹೊರಟ ಕಪ್ಪು ಉಡುದಾರಕೆ

ಅಸ್ತಿತ್ವ ಏನಿದ್ದರೂ ಶುದ್ದ ಶೂದ್ರನ ತುಂಡಷ್ಟೆ!


ಜಾಣರಾಗಲು ಹೊರಡಿ,

ಜಾಣನಂತೆ ಭ್ರಮೆ ಹುಟ್ಟಿಸಿಕೊಳ್ಳಬೇಡಿ,

ದಿಕ್ಕು ಎಂಟಿದ್ದರೂ ನಿಮ್ಮದೆ ಹಕ್ಕು

ಕಿತ್ತುಕೊಳ್ಳಿ, ದನಿ ಕಮರಿ ಹೋದರೆ

ನಿನ್ನೂರಿನಲ್ಲಿ ನೀನು ನಾಯಿಗಿಂತಲೂ ತುಚ್ಚ,

ಕಾಲ ಬದಲಾದರೂ ಕೊಚ್ಚೆಯಲ್ಲಿ ತೇಲುವ

ಸೂತಪುತ್ರನ ಭೀಮನ ಅಚ್ಚೆ ನಿನಗೆ ಕಾವಲು‌,

ಸಂಘ ನಂಬಿ ಕಮಂಗಿಯಾಗಿ ಕಂಗಾಲು

ಬಿದ್ದು, ಕೊನೆಗೆ ನಿನ್ನ ನೆಲಕ್ಕೆ ವಿಷ ಉಣಿಸದಿರು.

ಲೇಖಕರು: ಸೂರಿ ಅಣಚುಕ್ಕಿ

ನಿರ್ದೇಶಕರು, ರಂಗಭೂಮಿ ಕಲಾವಿದರು, ಸಂಭಾಷಣೆಕಾರರು, ಕಥೆಗಾರರು ಹಾಗೂ ಲೇಖಕರು





コメント


bottom of page