ದೇವರಾದ್ಯಲ್ಲೊ ನೀನು ಗಾಂಧಿ ತಾತ
- vishwa patha
- Oct 4, 2023
- 1 min read

ಗಾಂಧಿ ತಾತ.
ಏನೊ ನೀನು
ಮನುಸ್ಯ ಅನ್ಕೊಂಡಿದ್ದೆ.
ದೇವರು ಅದ್ಯಲ್ಲೊ
ಈ ಮಂದಿಗೆ.
ಕಛೇರಿಗಳ ಪೋಟವಾಗಿ
ನೋಟಿನೊಳಗ ಚಿತ್ರವಾಗಿ
ರಸ್ತೆ, ಚೌಕಗಳ ಹೆಸರಾಗಿ
ಗುಡಿಯ ಸೇರಿ
ದೇವರಾದ್ಯಲ್ಲೊ ಮಹರಾಯ!
ದಿಲ್ಲಿಯಲ್ಲಿನ ಉದ್ಯಾನದೊಳಗ
ದೊಡ್ಡ ಉದ್ಯಮದ ಗೇಟಿನೊಳಗ
ಬೃಹದಾಕಾರದ ಪ್ರತಿಮೆಯಾಗಿ ನಿಂತು,
ದೇವರಾದ್ಯಲ್ಲೊ ತಾತ ನೀನು!
ಹೇಳೊ, ನೀನು ತಾತ
ಖಾದಿ ಹೊದ್ದು
ಚರಕ ತಿರುವಿ
ಸರಳತೆ ಎಂದ.
ಸ್ವಾಭಿಮಾನದ ಪಾಠ ಹೇಳೊ
ಬದುಕ್ಯಾವಾಗ ಆಗುತ್ತೀಯ?
ಹೇಳೊ ನೀನು ತಾತ
ಸತ್ಯ ಅಹಿಂಸ ಎನ್ನೊ,
ಹಳ್ಳಿ ಬೆಳಗೊ
ಅಸ್ಪರ್ಶ್ಯತೆ ತೊಳೆಯೊ
ಸಮಾನತೆ ಸಾರೊ
ಬದುಕ ಸೇರಿ
ನಮ್ಮೊಳಗಿನ
ಬದುಕ್ಯವಾಗ ಆಗುತ್ತಿಯ?
-ಮೋಹನ ಕೊಳವಳ್ಳಿ.
Comments