ಬೂಷ್ಟು ಹಿಡಿದ ಮಾಂಸ
- vishwa patha
- Aug 17, 2023
- 1 min read

ಸ್ವಾತಂತ್ರ್ಯ ಸಿಕ್ಕ ಎಪ್ಪತ್ತೈದು ವರುಷ
ಕಳೆದರೂ,ಕಳಂಕ ತುಂಬಿಕೊಂಡು,
ಕೆಸರಿಗೆ ಮುಖವೊಡ್ಡಿ, ಹೇಸಿಗೆ ತಿನ್ನುವ
ಪ್ರಾಣಿಗಳ ಜೊತೆ ಹೆಜ್ಜೆ ಹಾಕುತ್ತಾ,
ತಾನೂ ಶ್ರೇಷ್ಠನಾಗಲು ಹೊರಟಿದ್ದಾನೆ..
ಶತಮೂರ್ಖ ಮುಠ್ಠಾಳ ದಲಿತ ಕೂಲಿ,
ಯಾವಾಗಲು ಗಂಜಿಯ ಗೀರಾಕಿನೇ..
ದುಡಿವ ಕೈಗಳು ಜಾಣ್ಮೆ ತೋರಿ,
ಜಗಲಿಯಲ್ಲಿ ಕೂತು ಹೆಂಡ ಕುಡಿದು
ಈ ದಿನದ ಮಾಂಸದೂಟ,ಈ ಕ್ಷಣದ
ಮದ್ಯಚಟ ಸ್ವರ್ಗದ ಸುಖವೆಂದು,
ಎದೆಯ ಕವಾಟ ಬೂಷ್ಟು ಹಿಡಿಸಿ
ಗೊರ ಗೊರ ಕೆಮ್ಮುತ್ತಾ ಕೂತು
ಸತ್ತವರಿಗೆ ಬೈದುಕೊಂಡು,ಇದ್ದವರಿಗೆ
ಹೊಗಳಿ ಬೂದಿ ಮುಚ್ಚಿದ ಕೆಂಡದಂತಿದ್ದಾನೆ..
ಕಿಚ್ಚು-ಹುಚ್ಚಿನ ನೆಪವು ದಲಿತ ಕೇರಿಯಲ್ಲಿ
'ಅಂಬೇಡ್ಕರ್ ಬೀದಿ'ಬೋರ್ಡಾಗಿ ನೇತಾಡುತ್ತಿತ್ತು,
ಆದರ್ಶಗಳು ಸಬ್ಸಿಡಿಯ ಟ್ಯಾಕ್ಟರ್,ಟಿಲ್ಲರ್
ಕಾರಾಗಿ ಬದಲಾಗಿದ್ದವು, 'ಭೀಮನ ಕಾಣಿಕೆ'ಎಂಬ
ಕಿಚ್ಚೊಂದು ಬಿಟ್ಟು,ನಾಮಾಂಕಿತ
ದೇವರುಗಳ ಆಶೀರ್ವಾದದ ಹೆಸರಿಗಳಿದ್ದವು...?
ಲೇಖಕರು: ದ್ರಾವಿಡ ದಲಿತ ಪ್ರಜ್ಞೆ
ಅಂಕಿತ ನಾಮದಲ್ಲಿ ಈ ಕವಿತೆಯನ್ನು ಬರೆದಿದ್ದಾರೆ
Comments