ಕಾರ್ಪೊರೇಟ್ ದೇವರು!
- vishwa patha
- Aug 26, 2023
- 1 min read

ಪುಟ್ಟ ಗುಡಿಯೊಂದರಲ್ಲಿ
ಕಂಡಕಂಡ ಭಕ್ತರಿಗೆಲ್ಲ
ದರುಶನ ನೀಡುತ್ತಿದ್ದ ದೇವ.
ಈಗ ದೊಡ್ಡ ದೇವಸ್ಥಾನ ಒಂದರಲ್ಲಿ ಕುಳಿತಿದ್ದಾನೆ.
ರಶೀದಿ ಹಿಡಿದು, ಸರತಿ ಸಾಲಲ್ಲಿ
ಬಂದವನಿಗೆ ಮಾತ್ರ ದರುಶನವನ್ನ ದಯಪಾಲಿಸುತ್ತಿದ್ದಾನೆ!
ದನಗಾಯಿ, ಕುರಿಗಾಯಿ
ಯರ್ರ್ಯಾರೊ!
ಕಂಬಳಿ ಹೊದ್ದು,
ಟೋಪಿ ಸಿಕ್ಕಿಸಿಕೊಂಡು ಹೆಂಗೆಂಗೊ!
ಬಂದು ಹರಹರ ಎಂದವರಿಗೆಲ್ಲ. ಹತ್ತಿರದಿಂದಲೆ
ಹರಿಸುತ್ತಿದ್ದ ದೇವ.
ಗರ್ಭಗುಡಿಯಲ್ಲಿ ಕುಳಿತುಕೊಂಡು,
ಶರ್ಟು ಬನಿಯಾನ್ ಕಳಚಿ
ಬಂದವರಿಗೆ ಮಾತ್ರ ಆಶಿರ್ವದಿಸಿ ಕಳಿಸುತ್ತಿದ್ದಾನೆ!
ಗುಡಿಯೊಂದರಲ್ಲಿ ಶಿಲೆಯೊಂದರ
ಸುಂದರ ಶಿಲ್ಪವಾಗಿ ಹೊಳೆಯುತ್ತಿದ್ದ ದೇವ.
ಈಗ ದೊಡ್ಡ ದೇವಸ್ಥಾನದಲ್ಲಿ
ಶ್ರೀಮಂತ ದಾನಿಯೊಬ್ಬ ಕೊಡಸಿದ ಬೆಳ್ಳಿದೊ,
ಚಿನ್ನದೊ ಕವಚ, ವಜ್ರ ಖಚಿತ ಕಿರೀಟ ಧರಸಿ ವಿಜೃಂಭಿಸುತ್ತಿದ್ದಾನೆ!
ಭಕ್ತನೊರ್ವನ ಭಕ್ತಿ ಅರ್ಚನೆಗೆ
ಅಗ್ಗವಾಗಿಯೆ ವಲೆಯುತ್ತಿದ್ದ ದೇವ.
ಈಗ ಕುಂಕುಮಾರ್ಚನೆ, ಗಂಧಾರ್ಚನೆ,
ಇನ್ನು ಎನೆನೊ ಅರ್ಚೆನೆಗಳ ಪಟ್ಟಿಯ ಮುಂದೆ
ಬೆಲೆ ನಿಗದಿಪಡಿಸಿ ಅತ್ಯಂತ
ದುಬಾರಿಯಾಗಿ ದಯೆ ಕರುಣಿಸುತ್ತಿದ್ದಾನೆ!
ಈಗೀಗ
ದೊಡ್ಡ ದೇವಸ್ಥಾನದಲ್ಲಿ ಕುಳಿತ ದೇವ.
ಸಿರಿವಂತನಿಗೆ ಸ್ಪೆಷಲ್ ಅಗಿ
ರಾಜಕಾರಣಿಗೆ ತುರ್ತು ಅಗಿ
ಬಡವನಿಗೆ ಸಾಮಾನ್ಯವಾಗಿ
ದರುಶನ ದೊರಕಿಸುತ್ತ
ಕಾರ್ಪೊರೇಟ್ ದೇವರಾಗುತ್ತಿದ್ದಾನೆ!
ಲೇಖಕರು: ಮೋಹನ ಕೊಳವಳ್ಳಿ Place: ಕೊಳವಳ್ಳಿ, ಶಿವಮೊಗ್ಗ
Education: MA in English, B.Ed, PGDT & PGDKJ
Profession: Lecturer
Hobbies: Reading & writing poem & articles
Ironically true
True words 👏
Superb bro
Very nice sir.
Meaningful
Superb facts sir