top of page

ಜನನ ಪ್ರಮಾಣ ಕಾಯ್ದೆ ಜಾರಿ:ಜನನ ಪ್ರಮಾಣಪತ್ರ ಇನ್ಮುಂದೆ ಅನೇಕ ಸೌಲಭ್ಯಗಳಿಗೆ ಏಕೈಕ ದಾಖಲೆ

  • Writer: vishwa patha
    vishwa patha
  • Sep 15, 2023
  • 1 min read

ನವದೆಹಲಿ: ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು, ವಿವಾಹ ನೋಂದಣಿ, ಚಾಲನಾ ಲೈಸನ್ಸ್, ಸರ್ಕಾರಿ ನೇಮಕಾತಿ ಹೀಗೆ ಹಲವು ಸೌಲಭ್ಯಗಳನ್ನು ಪಡೆಯಲು ಅಕ್ಟೋಬರ್ 1ರಿಂದ ದೇಶಾದ್ಯಂತ ಜನ್ಮ ಪ್ರಮಾಣಪತ್ರ ಏಕೈಕ ದಾಖಲೆಯಾಗಲಿದೆ. ಮುಂದಿನ ತಿಂಗಳ 1ರಿಂದ ಜನನ ಪ್ರಮಾಣ ಪತ್ರ ವಿತರಣೆಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆ ಜಾರಿಯಾಗಲಿದೆ. ಕಳೆದ ತಿಂಗಳು ಮುಕ್ತಾಯವಾದ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆ 2023ಕ್ಕೆ ಸಂಸತ್‌ ಅನುಮೋದನೆ ನೀಡಿತ್ತು.


ಸರ್ಕಾರಿ ಸೇವೆಗಳನ್ನು ದಕ್ಷವಾಗಿ ಮತ್ತು ಪಾರದರ್ಶಕವಾಗಿ ಒದಗಿಸಲು, ಸಾಮಾಜಿಕ ಪ್ರಯೋಜನ ಮತ್ತು ಡಿಜಿಟಲ್ ನೋಂದಣಿಯನ್ನು ಈ ಹೊಸ ಉಪಕ್ರಮ ಖಾತರಿಪಡಿಸಲಿದೆ ಎಂದು ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ-2003ರ ಅನುಷ್ಠಾನ ದಿನಾಂಕವನ್ನು ಘೋಷಿಸಿದ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.


ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆ.11ರಂದು ಅದಕ್ಕೆ ಸಹಿಯನ್ನೂ ಹಾಕಿದ್ದರು. ಹೊಸ ಕಾಯ್ದೆಯು ಭಾರತದ ರಿಜಿಸ್ಟ್ರಾರ್ ಜನರಲ್ ಅವರಿಗೆ ಜನಸಂಖ್ಯಾ ಸಮೀಕ್ಷೆಗಳನ್ನು ಅಧ್ಯಯನ ಮಾಡುವ, ನೋಂದಾಯಿತ ಜನನ ಮತ್ತು ಮರಣದ ರಾಷ್ಟ್ರೀಯ ದತ್ತಾಂಶಗಳನ್ನು ನಿರ್ವಹಿಸುವ ಹಾಗೂ ಇವುಗಳನ್ನು ರಾಜ್ಯಗಳು ನೇಮಿಸುವ ಮುಖ್ಯ ರಿಜಿಸ್ಟ್ರಾರ್ ಮತ್ತು ಸ್ಥಳೀಯ ಹಂತಕ್ಕೆ ಸರ್ಕಾರ ನೇಮಕ ಮಾಡುವ ರಿಜಿಸ್ಟ್ರಾರ್ ಜತೆ ಹಂಚಿಕೊಳ್ಳುವ ಅಧಿಕಾರ ಇರುತ್ತದೆ. ರಾಜ್ಯಮಟ್ಟದಲ್ಲೂ ಈ ಮಾಹಿತಿಯನ್ನು ನಿರ್ವಹಿಸಲಾಗುತ್ತದೆ.

Kommentare


bottom of page