2022ರಲ್ಲಿ ಸುರಿದ ಮಳೆಗೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಮಳೆಯು ವ್ಯತಿರಿಕ್ತವಾಗಿದೆ. ಹಿಂದಿನ 2023ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಶೇಕಡಾ 33ರಷ್ಟು ಕಡಿಮೆ ದಾಖಲಾಗಿದೆ.
ಬೆಂಗಳೂರು, ಜುಲೈ 12: ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಸುರಿವ ಮಳೆ ಈ ಭಾರಿ ಕೈ ಕೊಟ್ಟಿದೆ, ಮೇ ತಿಂಗಳಲ್ಲಿ ಬರಬೇಕಿದ್ದ ಮಳೆ ಈ ಬಾರಿ ತುಸು ತಡವಾದ ಕಾರಣ, ಜೂನ್ ತಿಂಗಳ ಸರಾಸರಿ ಮಳೆಯ ಪ್ರಮಾಣದಲ್ಲಿ ಕೊರತೆ ಉಂಟಾಗಿದೆ.
ನಗರದಲ್ಲಿ ಮೇ ತಿಂಗಳಲ್ಲಿ ಶೇಕಡಾ 138 ರಷ್ಟು ಅಧಿಕ ಮಳೆ ದಾಖಲಾಗಿದ್ದರೆ, ಜೂನ್‌ನಲ್ಲಿ ಶೇ. 35 ರಷ್ಟು ಮಳೆಯಾಗಿದೆ. ಇನ್ನೂ ಬೇಸಿಗೆಯ ತಿಂಗಳಾದ ಏಪ್ರಿಲ್‌ನಲ್ಲಿಯೂ ಶೇಕಡಾ 54.3ರಷ್ಟು ಪೂರ್ವ ಮುಂಗಾರು ಮಳೆ ಕೊರತೆ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
2022ರಲ್ಲಿ ಸುರಿದ ಮಳೆಗೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷ ಮಳೆಯು ವ್ಯತಿರಿಕ್ತವಾಗಿದೆ. ಹಿಂದಿನ 2023ರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಶೇಕಡಾ 33ರಷ್ಟು ಕಡಿಮೆ ದಾಖಲಾಗಿದೆ.
Comments