top of page

ಶಾಲಾ ಸಮಯ ಬದಲಾವಣೆ : ಅ.5ಕ್ಕೆ ಮೀಟಿಂಗ್‌

  • Writer: vishwa patha
    vishwa patha
  • Oct 4, 2023
  • 1 min read

ಬೆಂಗಳೂರು: ಸಿಲಿಕನ್ ಸಿಟಿಯ ಟ್ರಾಫಿಕ್‌ ಜಂಜಾಟದಿಂದ ಶಾಲೆಗೆ ತೆರಳುವ ಮಕ್ಕಳು ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ಅನುಭವಿಸುತ್ತಲೇ ಇದ್ದಾರೆ. ಆದ್ದರಿಂದ ಬೆಂಗಳೂರಿನ ಶಾಲೆಗಳ ಸಮಯ ಬದಲಾವಣೆ ಮಾಡುವ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಆರಂಭಿಸಿದೆ. ಈಗಾಗಲೇ ಈ ಸಂಬಂಧ ಶುಕ್ರವಾರ ಶಿಕ್ಷಣ ಇಲಾಖೆ ಮಹತ್ವದ ಸಭೆ ಕರೆದಿದ್ದು, ಸಭೆಯಲ್ಲಿ ಶಾಲಾ ಸಮಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.


ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈ ವೇಳೆ ಸಾರಿಗೆ ಇಲಾಖೆ, ಸಂಚಾರಿ ಪೊಲೀಸ್ ಇಲಾಖೆ, ಪೋಷಕರ ಸಂಘ, ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಶಾಲಾ ವಾಹನ ಅಸೋಸಿಯೇಷನ್ ಸದಸ್ಯರು, ಶಿಕ್ಷಕರ ಸಂಘದ ಸದಸ್ಯರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಸಮಯ ಬದಲಾವಣೆ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.


ಟ್ರಾಫಿಕ್ ಸಮಸ್ಯೆ ಹಿನ್ನೆಲೆ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆ ಆಗುತ್ತಿದ್ದ ಹಿನ್ನೆಲೆಯಿಂದ, ಹೈಕೋರ್ಟ್ ಸಮಯ ಬದಲಾವಣೆ ಮಾಡಲು ಶಿಕ್ಷಣ ಇಲಾಖೆಗೆ ಸೂಚಿಸಿತ್ತು. ಇನ್ನು ಶಾಲಾ ಸಮಯ ಬದಲಾವಣೆ ಕುರಿತು ಇದೇ ಗುರುವಾರ (ಅಕ್ಟೋಬರ್ 5) ಶಿಕ್ಷಣ ಇಲಾಖೆ ಮಹತ್ವದ ಸಭೆ ಕರೆದಿದಿದ್ದು ಆ ಸಭೆಯಲ್ಲೇ ಮಹತ್ವದ ಮಾಹಿತಿ ಹೊರಬೀಳಲಿದೆ.


ಶಾಲಾ ಸಮಯ ಬೆಳಗ್ಗೆ 9.30 ರಿಂದ ಸಂಜೆ 4.30ಕ್ಕೆ ಇದೆ. ಇದರ ಬದಲಾಗಿ ಸಮಯವನ್ನು ಅರ್ಧ ಗಂಟೆ ಅಥವಾ ಒಂದು ಗಂಟೆ ಮುಂಚೆ ಪ್ರಾರಂಭ ಮಾಡುವ ಪ್ರಸ್ತಾವನೆ ಶಿಕ್ಷಣ ಇಲಾಖೆ ಮುಂದಿದೆ. ಬೆಳಗ್ಗೆ 8.30 ರಿಂದ 3.30 ಅಥವಾ ಬೆಳಗ್ಗೆ 9 ರಿಂದ ಸಂಜೆ 3.30 ರವರೆಗೆ ಶಾಲೆ ತೆರೆಯುವ ಪ್ರಸ್ತಾಪ ಇದ್ದು, ಯಾವ ಸಮಯ ಅಂತ ಸಭೆಯಲ್ಲಿ ನಿರ್ಧಾರವಾಗುತ್ತದೆ.

Comments


bottom of page