top of page

'ಕಪ್ಪೆರಾಗ' ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ 'ಜ್ಯಾಕ್ಸನ್ ವೈಲ್ಡ್ ಮೀಡಿಯಾ' ಪ್ರಶಸ್ತಿ

  • Writer: vishwa patha
    vishwa patha
  • Sep 30, 2023
  • 1 min read

ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಕುಂಬಾರ ಕಪ್ಪೆ ಕುರಿತ ‘ಕಪ್ಪೆರಾಗ–ಕುಂಬಾರನ ಹಾಡು’ ಎಂಬ ಕನ್ನಡ ಕಿರುಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಹೆಸರಾದ ಪ್ರತಿಷ್ಠಿತ 'ಜ್ಯಾಕ್ಸನ್ ವೈಲ್ಡ್ ಮೀಡಿಯಾ' ಪ್ರಶಸ್ತಿ ಲಭಿಸಿದೆ. ಈ ಕಿರುಚಿತ್ರವನ್ನು ನಿರ್ದೇಶಕ ಪ್ರಶಾಂತ್ ಎಸ್. ನಾಯಕ್ ಅವರು ನಿರ್ದೇಶಿಸಿದ್ದಾರೆ. ಪ್ರಶಾಂತ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ‘ಈ ಚಿತ್ರವನ್ನು ಜಗತ್ತಿನಲ್ಲಿರುವ 8 ಕೋಟಿ ಕನ್ನಡ ಮಾತನಾಡುವ ಜನರಿಗೆ ಹಾಗೂ ಭಾರತದ 150 ಕೋಟಿ ಜನರಿಗೆ ಅರ್ಪಣೆ’, ಸಂಗೀತ, ಸಾಹಿತ್ಯ ಸೇರಿದಂತೆ ಅನಾದಿಕಾಲದಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕನ್ನಡ ನಾಡು ಸಾವಿರಾರು ವರ್ಷಗಳಿಂದ ನಿಸರ್ಗದತ್ತವಾಗಿಯೂ ಸಂಪದ್ಭರಿತವಾಗಿದೆ. ಇಂಥ ನಾಡಿನ ಕನ್ನಡ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಜ್ಯಾಕ್ಸನ್ ವೈಲ್ಡ್ ಮೀಡಿಯಾ ಪ್ರಶಸ್ತಿ ಲಭಿಸಿದೆ’ ಎಂದು ಬರೆದುಕೊಂಡಿದ್ದಾರೆ.






ಜ್ಯಾಕ್ಸನ್ ವೈಲ್ಡ್ ಮೀಡಿಯಾದ ಅತ್ಯುತ್ತಮ ಪ್ರಾಣಿ ವರ್ತನೆ ವಿಭಾಗದ ಪ್ರಶಸ್ತಿಯನ್ನು ಪಡೆದಿರುವ 'ಕಪ್ಪೆರಾಗ' ಕಿರಿಚಿತ್ರಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಹ ಎಕ್ಸ್ ಖಾತೆಯಲ್ಲಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.





Comments


bottom of page