top of page

ಕೆನೆಡಾ ಟು ಇಂಡಿಯಾ: ಪೌರತ್ವ ಬದಲಾಯಿಸಿದ ಅಕ್ಷಯ್ ಕುಮಾರ್‌ ಈಗ ಹಿಂದುಸ್ತಾನಿ

  • Writer: vishwa patha
    vishwa patha
  • Aug 15, 2023
  • 1 min read


ಮುಂಬೈ: ಬಾಲಿವುಡ್‌ನ ಪ್ರತಿಭವಂತ ಸ್ಟಾರ್‌ ನಟ ಕೆನೆಡಾ ಪ್ರಜೆಯಾಗಿದ್ದ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ವವನ್ನು ಪಡೆದಿದ್ದಾರೆ. ಸ್ವಾತಂತ್ರ್ಯೋತ್ಸವ ದಿನದಂದು ಅವರು ಈ ವಿಷಯವನ್ನು ತಮ್ಮ ಟ್ವಿಟ್ಟರ್‌(ಈಗ ಎಕ್ಸ್)ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


55 ವರ್ಷದ ಅಕ್ಷಯ್ ತಮ್ಮ ಟ್ವಿಟ್ಟರ್‌(ಈಗ ಎಕ್ಸ್)ಖಾತೆ (@akshaykumar)ಯಲ್ಲಿ "ಈಗ ಹೃದಯ ಹಾಗೂ ಪೌರತ್ವ ಎರಡೂ ಹಿಂದೂಸ್ಥಾನಿ. ಸ್ವಾತಂತ್ರ್ಯೋತ್ಸವದ ಶುಭಾಶಯಗಳು! ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ.


ಬದುಕಿನ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ, ಕೆನಡಾ ದೇಶದ ಪೌರತ್ವ ಪಡೆಯುವುದು ಅವರಿಗೆ ಅನಿವಾರ್ಯವಾಗಿತ್ತಂತೆ. 1990ರಲ್ಲಿ ನಟಿಸಿದ 15 ಚಿತ್ರಗಳ ಸತತ ಸೋಲಿನಿಂದ ಅವರ ಬದುಕಿನಲ್ಲಿ ಹಲವಾರು ಬದಲಾಣೆಗಳಾಗಿದ್ದವವು. ಈ ಸಮಯದಲ್ಲಿ ಅಕ್ಷಯ್‌ ಅವರು ಕೆನೆಡಾದ ಪೌರತ್ವ ಪಡೆದುಕೊಂಡಿದ್ದರು.



ಕೆಲವು ವರ್ಷಗಳ ಹಿಂದೆ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯೇತರ ಸಂದರ್ಶನವನ್ನು ಅಕ್ಷಯ್ ಕುಮಾರ್ ನಡೆಸಿಕೊಟ್ಟಿದ್ದರು. ಆದರೆ ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮತ ಚಲಾಯಿಸಿರಲಿಲ್ಲ. ಇದು ಅವರ ಪೌರತ್ವದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಚರ್ಚೆ ವ್ಯಾಪಕವಾಗುತ್ತಿದಂತೆ ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿರುವುದಾಗಿ ಅಕ್ಷಯ್ ಹೇಳಿಕೊಂಡಿದ್ದರು.

Comments


bottom of page