top of page

ಪರದೆ

  • Writer: vishwa patha
    vishwa patha
  • Sep 8, 2023
  • 1 min read


ಧರ್ಮದ ನಿಷೆಯಲ್ಲಿ

ಮೌಢ್ಯದ ತುಮಲಲ್ಲಿ

ದೇಹಕ್ಕೆ ಪರದೆ ಹೊದಿಸಲು

ಯಶನಾದೆ ಹೊರತು

ನನ್ನೀ ನಿಸ್ಸಂಕೋಚದ ಕಾಮನೆಗಳಿಗಲ್ಲ.


ಮನಸ್ಸು!

ಹಕ್ಕಿಯಂತೆ ಸ್ವಚಂದ

ಹೂವಿನಂತೆ ಮೋಹಕ.

ಅದೆಷ್ಟು ದುಂಬಿಗಳಿಗೆ ಆಹ್ವಾನವಿತ್ತು

ಕೈ ಬೀಸಿ ಕರೆದಿದೆಯೊ

ನೀ ಹೆಕ್ಕಿ, ಹೇಳಲಾರೆ.


ಆಕ್ರಮಣದಲ್ಲಿ

ಮೂಳೆಯ ಈ ತಡಿಕೆಯನ್ನಷ್ಟೆ ಬಂಧಿಸಿ

ಮಹಾನ್ ಪರಾಕ್ರಮಿಯಂತೆ ಬೀಗುವ

ನಿನ್ನ ಧರ್ಮದ ಸರ್ವಾಧಿಕಾರ ಲೆಕ್ಕಿಸದೆ

ಹರಿದಾಡುತಿಹವು ನನ್ನೀ ಕಲ್ಪನೆಗಳು.


ಪ್ರಜಾಸತ್ತತೆಗೆ ಭಂಗ ತರದಂತೆ

ತನ್ನೊಳಗೊಬ್ಬ ರಾಜನ ನೇಮಿಸಿ

ಪರದೆಯ ಪರಿಧಿಯನ್ನು ಮೀರಿ

ಮರಿಚಿಕೆಯ ಹಕ್ಕಿಂತೆ ಹಾರುತಿಹವು

ನಿನೊ, ನಿನ್ನ ಧರ್ಮವೊ

ಎಂದೆಂದಿಗು ಬಂಧಿಸಲಾರದ

ಎತ್ತರೆತ್ತರಕ್ಕೆ, ಉದ್ದಗಲಕ್ಕೆ.


ಅಲ್ಲಿ,

ಕುಣಿದು ಕುಪ್ಪಳಿಸಿ

ಬೆಟ್ಟ ಗುಡ್ಡವೆನ್ನೆಲ್ಲಾ ಹತ್ತಿಳಿದು

ಮದನರ ಪ್ರೇಮ ಬಾಣಕೆ ಸೋತು

ಬಾಹುಗಳಲ್ಲಿ ನಿರಮ್ಮಳಾಗಿ

ಪ್ರೇಮ ಕಹಳೆಯನ್ನೂದುವುದಕ್ಕೆ

ನಿನ್ಯಾವ ಪರದೆಯ ಬೇಲಿಯು ಇಲ್ಲ.

ಧರ್ಮಶಾಸ್ತ್ರದ ಭಯವು ಇಲ್ಲ.



ಲೇಖಕರು: ಮೋಹನ ಕೊಳವಳ್ಳಿ

Place: ಕೊಳವಳ್ಳಿ, ಶಿವಮೊಗ್ಗ

Education: MA in English, B.Ed, PGDT & PGDKJProfession: LecturerHobbies: Reading & writing poem & articles


2 Comments


Guest
Sep 09, 2023

👏👏

Like

Guest
Sep 09, 2023

💐😍

Like
bottom of page