ಬೆಂಗಳೂರು: ನಾವೇಲ್ಲರೂ ಸ್ವಾತಂತ್ರ್ಯೋತ್ಸವದ ಸಡಗರದಲ್ಲಿದೆ. ಆದರೆ, ಈ ವರ್ಷ ನಾವು ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವವು 76ನೆಯದೋ ಅಥವಾ 77ನೇ ಸ್ವಾತಂತ್ರ್ಯೋತ್ಸವವೋ ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ಪ್ರತಿ ವರ್ಷ ಆಗಸ್ಟ್ 15ರಂದು ನಮ್ಮ ಹೆಮ್ಮೆ ಹಾಗೂ ದೇಶಭಕ್ತಿಯ ಪ್ರತೀಕವಾಗಿ ಇಡೀ ದೇಶವೇ ತ್ರಿವರ್ಣದಿಂದ ಕಂಗೊಳಿಸುತ್ತದೆ.
ಭಾರತದ ಏಕತೆಯ, ಸಾರ್ವಭೌಮತೆಯ ಪ್ರತೀಕವಾಗಿ ಈ ದಿನ ಎಲ್ಲೆಡೆ ತ್ರಿವರ್ಣ ಧ್ವಜವು ರಾರಜೀಸುತ್ತವೆ, ರಾಷ್ಟ್ರಗೀತೆ, ದೇಶಭಕ್ತಿಗೀತೆಗಳ ಮೊಳಗುತ್ತವೆ, ಸ್ವಾತಂತ್ರಕ್ಕಾಗಿ ಬೆವರು, ನೆತ್ತರು ಹರಿಸಿ ಪ್ರಾಣ ತ್ಯಾಗಮಾಡಿದ ಮಹಾನ್ ನಾಯಕರನ್ನು ಸ್ಮರಿಸಿ, ಅವರ ತ್ಯಾಗ, ಬಲಿದಾನ ಹಾಗೂ ದೇಶಭಕ್ತಿಯನ್ನು ಕೊಂಡಾಡಲಾಗುತ್ತದೆ.
ಆದರೆ, ಈ ಬಾರಿ ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವ 76ನೇ ಅಥವಾ 77ನೇ ಸ್ವಾತಂತ್ರ ದಿವಸವಾ? ಎಂಬ ಗೊಂದಲ ಕೆಲವರಲ್ಲಿರುತ್ತದೆ, ಈಗ ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವ ಎಷ್ಟು ಎಷ್ಟನೇಯದ್ದು ಅದಕ್ಕೆ ಇಲ್ಲಿದೆ ಸ್ಪಷ್ಟ ಉತ್ತರ.
1947ರ ಆಗಸ್ಟ್ 15ರಂದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟರು. ಮೊದಲ ಸ್ವಾತಂತ್ರ್ಯ ಉತ್ಸವವನ್ನು ಅಂದಿನ ದಿನದಂದು ಆಚರಿಸಲಾಯಿತು, ಅಂದು ಆಚರಿಸಿದ ಸ್ವಾತಂತ್ರ್ಯೋತ್ಸವ ಸ್ಮರಣೆಗಾಗಿ ಪ್ರತೀ ವರ್ಷ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನವನ್ನು ಭಾರತೀಯರೆಲ್ಲ ಸೇರಿ ಸಂಭ್ರಮಿಸುತ್ತಾರೆ.
1948ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯದ ಮೊದಲ ವರ್ಷದ ಆಚರಣೆ ನಡೆಯಿತು. ಅಂದರೆ ಅದು ಎರಡನೇ ಸ್ವಾತಂತ್ರ್ಯ ದಿನಾಚರಣೆ. ಇದರ ಪ್ರಕಾರ, 2023ರ ಆಗಸ್ಟ್ 15ರಂದು ನಾವು ಆಚರಿಸುತ್ತಿರುವುದು 77ನೇ ಸ್ವಾತಂತ್ರ್ಯ ದಿನಾಚರಣೆ ಅಥವಾ ಸ್ವಾತಂತ್ರ್ಯೋತ್ಸವ. ಮತ್ತು ಇದು ಭಾರತ ಸ್ವಾತಂತ್ರ್ಯದ 76ನೇ ವರ್ಷಾಚರಣೆಯೂ ಹೌದು.
1947ರ ಆಗಸ್ಟ್ 15 ಮೊದಲ ಸ್ವಾತಂತ್ರ್ಯೋತ್ಸವದ ದಿನ ಅಥವಾ ಮೊದಲ ಸ್ವಾತಂತ್ರ್ಯ ದಿನಾಚರಣೆ. 1948ನೇ ಇಸವಿಯ ಆಗಸ್ಟ್ 15 ಭಾರತ ಸ್ವಾತಂತ್ರ್ಯದ ಮೊದಲ ವರ್ಷ ಪೂರ್ಣಗೊಂಡ ದಿನ. ಅಂದರೆ ಸ್ವಾತಂತ್ರ್ಯದ ಮೊದಲ ವರ್ಷಾಚರಣೆ ದಿನ.
ಹೀಗಾಗಿ, ಸ್ವಾತಂತ್ರ್ಯದ 76 ವರ್ಷಗಳನ್ನು ಪೂರೈಸಿರುವ ಭಾರತವು 2023ರ ಆಗಸ್ಟ್ 15ರಂದು 77ನೇ ಸ್ವಾತಂತ್ರ್ಯ ದಿನದ ಉತ್ಸವದ ಆಚರಣೆ ಮಾಡುತ್ತಿದೆ.
Kommentare